Friday, October 24, 2025
Eye Donation Shree Chikka Muniyappa at Masthi Village ಮಾಸ್ತಿಯಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ.24.10.25 @jiganiramakrishna
ಪತ್ರಿಕಾ ಪ್ರಕಟಣೆಗಾಗಿ : ಮಾಸ್ತಿಯಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ.
24.10.25 ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ ಗ್ರಾಮದದಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರು (84) ತಡರಾತ್ರಿ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಮುಂಜಾನೆ 1ಗಂಟೆಯ ಸಮಯದಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.
ಮೃತರಮಗಳು ಜಯಮಾಲ ಕಂಬನಿ ಮಿಡಿಯುತ್ತಾ ನನ್ನ ತಂದೆಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ಜಗದ ಬೆಳಕು ಭಗವಾನ್ ಬುದ್ಧರು ನಮಗೆ ದಾರಿ ದೀಪ ಮತ್ತು ನೇತ್ರದಾನಿ ಪುನಿತ್‌ರಾಜಕುಮಾರ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಾವು ಕಳೆದುಕೊಂಡಿದ್ದು ನಮ್ಮ ಅಪ್ಪ ಒಬ್ಬರನ್ನು ಆದರೆ ಅವರ ಕಣ್ಣುಗಳು ನಾಲ್ಕುಜನರಲ್ಲಿ ಬದುಕಿರುತ್ತವೆ ನೇತ್ರದಾನಕ್ಕೆ ಡಾ.ರಾಜಕುಮಾರ್ ಕುಟುಂಬ ನಮಗೆ ಸ್ಪೂರ್ತಿ ಎಂದರು.
ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡÀಬೇಕೆಂದು ಮೃತರ ಮಗ ಶಂಕರ್ ಅವರ ಕಳಕಳಿಯ ಪ್ರಾರ್ಥನೆ .
ನೇತ್ರದಾನಕ್ಕೆ ಮನ ಒಲಿಸಿ, ಆಪರೇಷನ್ ಆಗಿದ್ದರೂ ಜೊತೆಯಲ್ಲಿ ನಿಂತು ನೇತ್ರದಾನ ಮಾಡಿಸಿದ್ದು ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ ಕುಟುಂಬ.
ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ಮೃತ ಚಿಕ್ಕಮುನಿಯಪ್ಪನವರ ಮಕ್ಕಳಾದ ಜಯಮಾಲ,ಶಂಕರ್,ಪ್ರಕಾಶ,ಸೋಮೆಶ್,ಹರೀಶ,ಅಳಿಯರಾದ ಕೆಂಪಣ್ಣ, ಸೊಸೆಯಂದಿರು, ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ಮಂಜುಳಾರಾಮಕೃಷ್ಣ,ನಾರಾಯಣ ನೇತ್ರಾಲಯದ ಅಶೋಕ್ ಮತ್ತು ಕುಟುಂಬಸ್ಥ್ತರು ಹಾಜರಿದ್ದರು.
ನೇತ್ರದಾನ– ಅಂಗಾಂಗ ದಾನ–ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ 24/7 ಕೆ.ಜೆ ಮೇಕಪ್ ಸ್ಟೂಡಿಯೋ 9964516171 ಹಾಗು ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
ನೇತ್ರದಾನ– ಅಂಗಾಂಗ ದಾನ–ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ಫೋಟೊ ಶೀರ್ಷಿಕೆ :1 ಶ್ರೀ ಚಿಕ್ಕಮುನಿಯಪ್ಪ
ಫೋಟೊ ಶೀರ್ಷಿಕೆ : 2 ಮಕ್ಕಳಾದ ಜಯಮಾಲ,ಶಂಕರ್,ಪ್ರಕಾಶ,ಸೋಮೆಶ್,ಹರೀಶ,ಅಳಿಯರಾದ ಕೆಂಪಣ್ಣ, ಸೊಸೆಯಂದಿರು, ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ಮಂಜುಳಾರಾಮಕೃಷ್ಣ,ನಾರಾಯಣ ನೇತ್ರಾಲಯದ ಅಶೋಕ್ ಮತ್ತು ಕುಟುಂಬಸ್ಥ್ತರು
Subscribe to:
Post Comments (Atom)


No comments:
Post a Comment