Wednesday, January 28, 2026

HOSABELAKU TRUST: Press Note : ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸ...

HOSABELAKU TRUST: Press Note : ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸ...: ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸವ ಆಚರಣೆ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ-ಅಂಗಾಂಗ -ದೇಹದಾನಿಗಳಿಗೆ ನಮನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ...

Press Note : ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸವ ಆಚರಣೆ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ-ಅಂಗಾಂಗ -ದೇಹದಾನಿಗಳಿಗೆ ನಮನ ಮತ್ತು ಸಾಧಕರಿಗೆ ಸನ್ಮಾನ 25.1.2026

ಹೊಸಬೆಳಕು ಟ್ರಸ್ಟ್(ರಿ) 20ನೇ ವಾರ್ಷಿಕೋತ್ಸವ ಆಚರಣೆ, ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರ, ನೇತ್ರ-ಅಂಗಾಂಗ -ದೇಹದಾನಿಗಳಿಗೆ ನಮನ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಜಿಗಣಿಯ ಸೆಂಟ್‌ಜೋಸೆಫ್ ಹೈಸ್ಕೂಲಿನಲ್ಲಿ ನಡೆಯಿತು. ಹೊಸಬೆಳಕು ಟ್ರಸ್ಟಿನ ಸಂಸ್ಥಾಪಕರಾದ ಜಿಗಣಿರಾಮಕೃಷ್ಣ ಅವರ ತಂದೆ ಶ್ರೀ ಡ್ರೈ ವರ್ ಮುನಿಶಾಮಯ್ಯ ಅಮ್ಮ ನೇತ್ರದಾನಿ ಶ್ರೀಮತಿ ಸೊಣ್ಣಮ್ಮನವರ ಜ್ನಾಪಕಾರ್ಥ ಕಾರ್ಯಕರಮ ಹಮ್ಮಿಕೊಳ್ಳಲಾಗಿತ್ತು. 63ಕ್ಕೂ ಹೆಚ್ಚು ಜನ ಅಂಗಾAಗದಾನಿ(ಕಣ್ಣು) ಕುಟುಂಬಗಳಿಗೆ, ಕಣ್ಣು ಹಾಕಿಸಿಕೊಂಡ ೪ಜನರಿಗೆ, 3ಜನ ದೇಹದಾನಿ ಕುಟುಂಬಗಳಿಗೆ, ಕಿಡ್ನಿ, ಲಿವರ್ ದಾನ ಮಾಡಿದ ಎರಡು ಕುಟುಂಬಗಳನ್ನು ಸನ್ಮಾನಿಸಲಾಯಿತು, ಜೊತೆಯಲ್ಲಿ ಅಂತರಾಷ್ಟಿಯ ಪ್ಯಾರಾ ತ್ರೋಬಾಲ್ ತಂಡದ ನಾಯಕಿ ಶ್ರೀಮತಿ ರೇಣುಕಾ ಮತ್ತು ತಂಡವನ್ನು, ಸರ್ಕಾರಿ ಶಾಲೆಯ 10ನೇ ತರಗತಿಯಲ್ಲಿ ಹೆಚ್ಚಿನ ಅಂಕಪಡೆದ, ಆನೇಕಲ್ ತಾಲ್ಲೂಕಿನ ಕಬ್ಬಡ್ಡಿಯಲ್ಲಿ ಜಿಲ್ಲ್ಲಾ ಮಟ್ಟಕ್ಕೆ ಆಯ್ಕೆಯಾದ ಯುವತಿ ಮತ್ತು ಯುವಕರನ್ನು, 100ಕ್ಕೂ ಹೆಚ್ಚು ಭಾರಿ ರಕ್ತದಾನ ಮಾಡಿದವರನ್ನು, ವಿಶೇಷ ಸಾಧಕರನ್ನು, ವೈಧ್ಯರು, ಜೀವಗಳ ಉಳಿಸಲು ಸಹಕರಿಸಿದ ವೈಧ್ಯರುಗಳು,ಆಸ್ಪತ್ರೆಗಳು,ರಕ್ತ ನಿದಿಗಳು,ನೇತ್ರ ನಿದಿಗಳು,ನರ್ಸ್ಗಳು,ಆಂಬುಲೆನ್ಸ್ ಡ್ರೈ ವರ್ಗಳು, ಸೂಲಗಿತ್ತಿ, ಕರೋನಾ ವಾರಿಯರ್ಸ್ಗಳನ್ನು ಗೌರವಿಸಲಾಯಿತು. ಬೃಹತ್ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ನಾರಾಯಣ ನೇತ್ರಾಲಯದಿಂದ ಕಣ್ಣಿನ ಎಲ್ಲಾ ಕಾಯಿಲೆಗಳ ಪರೀಕ್ಷೆ, ಪೊರೆ ಶಸ್ತ್ರ ಚಿಕಿತ್ಸೆ, ಉಚಿತ ಕನ್ನಡಕ ಆಯೋಜಕರಿಂದ.ನಾರಾಯಣ ಹೃದಯಾಲಯದಿಂದ ಹೃದಯರೋಗಗಳ ತಪಾಸಣೆ,ಈಸಿಜಿ, ದಿ ಆಕ್ಸಪರ್ಡ್ ಆಸ್ಪತ್ರೆಯಿಂದ ಸಾಮಾನ್ಯ ಖಾಯಿಲೆಗಳ,ಮಕ್ಕಳ, ಇಎನ್‌ಟಿ,ಮೂಳೆ,ಚರ್ಮ ಇತರೆ ರೋಗಗಳ ಪರೀಕ್ಷೆ ಮತ್ತು ಉಚಿತ ಔಷದಿ, ಡಾ.ಲಾವಣ್ಯಕಿರಣ್ ಲಕ್ಷ್ಯ ವುಮನ್ ಮತ್ತು ಫರ್ಟಿಲಿಟಿ ಕ್ಲಿನಿಕ್‌ವತಿಯಿಂದ ಬಂಜೆತನ ಪರೀಕ್ಷೆ ಮತ್ತು ಸಲಹೆ, ಮುಟ್ಟು, ಹೆರಿಗೆ, ಗರ್ಭಕೋಷ, ಇತರೆ ಸ್ತ್ರೀರೋಗಳ ಪರೀಕ್ಷೆ. 150ಕ್ಕೂ ಹೆಚ್ಚು ಜನ ಶಾಲಾ ಪ್ರೌಡ ಹೆಣ್ಣುಮಕ್ಕಳಿಗೆ ಮುಟ್ಟಿನ ದಿನಗಳ ಶುಚಿತ್ವ, ಸಮಸ್ಯೆಗಳು,ಮರುಬಳಕೆ ಬಟ್ಟೆ ಪ್ಯಾಡ್ಗಳು,ಮೆನ್ಸೆಸ್ಟೆçಯಲ್ ಕಪ್ಸ್ ಬಳಕೆ ಬಗ್ಗೆ ತಿಳುವಳಿಕೆ ಮತ್ತು ವಿತರಣೆ. ಬಯೋಕಾನ್ ಫೌಂಡೇಷನ್‌ವತಿಯಿಂದ ಕ್ಯಾನ್ಸರ್ ತಪಾಸಣೆ – Breast Cancer Thermal Screening, ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಆಸ್ಪತ್ರೆಯಿಂದ ದಂತ ಪರೀಕ್ಷೆ , ಏಕನಾ ಆಸ್ಪತ್ರೆಯಿಂದ ರಕ್ತ ಪರೀಕ್ಷೆ ,ವೈಧ್ಯರ ಬೇಟಿ, ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್, ನಾರಾಯಣ ನೇತ್ರಾಲಯ,ಜೀವ ಸಾರ್ಥಕತೆ ವತಿಯಿಂದ ನೇತ್ರದಾನ,ಅಂಗಾಂಗ ,ದೇಹ ದಾನ ನೊಂದಣೆ ಮತ್ತು ಅರಿವು ಕಾರ್ಯಕ್ರಮ ನಡೆಯಿತು. ಆರೊಗ್ಯ ಶಿಬಿರದಲ್ಲಿ 532 ಕ್ಕೂ ಹೆಚ್ಚುಜನ ಪಾಲ್ಗೊಂಡು ಶಿಬಿರದ ನಾನಾ ಪ್ರಯೋಜನ ಪಡೆದರು, 123 ಜನರಿಗೆ ಈಸಿಜಿ, 104 ಉಚಿತ ಕನ್ನಡಕ, 38 ಜನರಿಗೆ ಉಚಿತ ಪೊರೆ ಶಸ್ತ ಚಿಕಿತ್ಸೆ, ಇತರೆ ಎಲ್ಲಾ ಸೌಲಭ್ಯಗಳನ್ನು ಪಡೆದರು. ಹೊಸಬೆಳಕು ಟ್ರಸ್ಟಿನ ಡಾ.ರಾಮಕೃಷ್ಣ ತಂದೆ ತಾಯಿ ಫೋಟೋಗೆ ಪುಶ್ಪಾರ್ಚನೆ ಮಾಡಿ ಭಾವುಕರಾಗಿ ಅಪ್ಪ ಅಮ್ಮನ ಹೆಸರಲ್ಲಿಂದು ಶಿಬಿರ ಕಾರ್ಯಕ್ರಮ ಮಾಡುತ್ತಿರುವುದು ಸಂತಸ ತಂದಿದೆ, ಬಡ ಕೂಲಿಕಾರರ ಕುಟುಂಬದಲ್ಲಿ ಹುಟ್ಟಿ ಹೊಸಬೆಳಕು ಟ್ರಸ್ಟ್ ಸ್ಥಾಪಿಸಿ ಸಾವಿರಾರು ಜನರಿಗೆ ಕಣ್ಣುಗಳ ಪೊರೆ ಆಪರೇಷನ್, ಕಣ್ಣು ಇಲ್ಲದವರಿಗೆ ನೇತ್ರದಾನಗಳ ಮೂಲಕ ದೃಷ್ಟಿ, ಜೀವಗಳ ಉಳಿಸುವ ರಕ್ತದ ವ್ಯವಸ್ಥೆ, ಶಾಲಾ ಮಕ್ಕಳಿಗೆ ಆರೋಗ್ಯ ಶಿಬಿರ, ಅಮ್ಧ ಮತ್ತು ಅಂಗವಿಕಲರ ಸೇವೆ ಹಾಗು ನೊಂದ ಸಮಾಜಕ್ಕೆ ಅಗತ್ಯ ಸೇವೆಗಳನ್ನು ನೀಡುತ್ತಾ ಬಂದಿರುವುದು ನಮ್ಮ ಹೆಮ್ಮೆ ಎಲ್ಲರೂ ಅಂಗಾಂಗ ದಾನಕ್ಕೆ ಮುಂದಾಗಬೇಕೆoದರು. ಡಾ.ಎA.ಕೃಷ್ಣಪ್ಪ ಮಾತನಾಡುತ್ತ ತನ್ನ ಮಗ ಧನುಷ್ಗೆ ಮಧುಮೇಹ ಆಗಿ ಕಣ್ಣು ಪೊರೆ ಬಂದಾಗ IAR’India ಸಂಸ್ಥೆಯಿAದ ೨೦೦೩ರಲ್ಲಿ ಮಣಿಪಾಲ್ ಆಸ್ಪತ್ರೆಯಲ್ಲಿ ಶಸ್ತçಚಿಕಿತ್ಸೆ ಮಾಡಿಸಿ ಕೊಟ್ಟಿದ್ದೇವು ನಮ್ಮಿಂದ ಪ್ರೇರೇಪಿತನಾಗಿ ಜಿಗಣಿರಾಮಕೃಷ್ಣ ಅವರು ಹೊಸಬೆಳಕು ಟ್ರಸ್ಟ್ ಪ್ರಾರಂಭಿಸಿ ನಿರಂತರ ಸೇವೆನೀಡುತ್ತಿರುವುದು ಅಭಿನಂದನಾರ್ಹ ಎಂದರು. ಜಿಗಣಿ ಪುರಸಭಾ ಸದಸ್ಯ ಜಿಗಣಿವಿನೋದ್ ಅಣ್ಣಾ ನಮ್ಮ ಸಮಾಜ ಸೇವೆಯ ಸ್ಪೂರ್ತಿ,ಸಮಾಜ ಸೇವಯನ್ನು ಕಲಿತದ್ದು ಅವರಿಂದಲೇ ಸಾವಿರಾರು ಕುಟುಂಬಗಳಿಗೆ ದಾರಿದೀಪವಾದ ಅಣ್ಣನ ಕುಟುಂಬಕ್ಕೆ ದೇವರು ಆರೋಗ್ಯ ಆಯಸ್ಸು ಕೊಡಲಿ ಎಂದರು. ಕೊನೆಯಲ್ಲಿ ವೇದಿಕೆಯಲ್ಲಿದ್ದವರೆಲ್ಲಾ ಸೇರಿ ಶ್ರಿ ರಾಮಕೃಷ್ಣ ಕುಟುಂಬವನ್ನು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಡಾ.ಲಾವಣ್ಯಕಿರಣ್, ಡಾ.ಎಂ,ಕೃಷ್ಣಪ್ಪ, ಜೆ.ಸಿ.ಕೃಷ್ಣಪ್ಪ. NCPS ಬಿ.ಸಿ.ಮೋಹನ್, ಜಿಗಣಿವಿನೋದ್, ಮುರಳಿ, ರಾಜೇಂದ್ರಪ್ರಸಾದ್, ವಾಣಿಶರ್ಮ, ಲಕ್ಷ್ಮೀ, ಜಗದೀಶ್ ಪಾಠೀಲ, ಸರಸ್ವತಿ. ಮಂಜುಳಾರಾಮಕೃಷ್ಣ, ಧನುಷ್ ಪ್ಯಾರಾತ್ರೋಬಾಲ್ ರೇಣುಕಾ, ಶಿವಶಂಕರ್, ರವಿ , ಕಾಂತರಾಜು, ವೆಂಕಟೇಷ್. ಲಾಯರ್ ವಿನುತಾ, ಜಯಮಾಲ ಮುಂತಾದವರಿದ್ದಾರೆ.

Saturday, January 24, 2026

HosabelakuTrust on 20th Anniversary, Mega Health Camp & Hanour program. at Jigani ಬೃಹತ್ ಅರೋಗ್ಯ ತಪಾಸಾಣೆ, ರಕ್ತದಾನ ಶಿಬಿರ, ಅಂಗಾಂಗ ದಾನಿಗಳ ಕುಟುಂಬಗಳಿಗೆ, ರಕ್ತದಾನಿಗಳಿಗೆ, ಅಂದರಿಗೆ.. ವಿಕಲಚೇತನರಿಗೆ, ಸಾಧಕರಿಗೆ, ಸಮಾಜಸೇವಕರಿಗೆ ಗೌರವ ಸನ್ಮಾನ on 25.1.26

ನಲ್ಮೆಯ ಬಂಧುಗಳೇ.. ಹೊಸಬೆಳಕು ಟ್ರಸ್ಟಿನ 20ನೇ ವಾರ್ಷಿಕೋತ್ಸವ, ಬೃಹತ್ ಅರೋಗ್ಯ ತಪಾಸಾಣೆ, ರಕ್ತದಾನ ಶಿಬಿರ, ಅಂಗಾಂಗ ದಾನಿಗಳ ಕುಟುಂಬಗಳಿಗೆ, ರಕ್ತದಾನಿಗಳಿಗೆ, ಅಂದರಿಗೆ.. ವಿಕಲಚೇತನರಿಗೆ, ಸಾಧಕರಿಗೆ, ಸಮಾಜಸೇವಕರಿಗೆ ಗೌರವ ಸನ್ಮಾನ.. ಅರೋಗ್ಯ ಶಿಬಿರ.. ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ತಾವುಗಳು ಹೊಸಬೆಳಕು ಟ್ರಸ್ಟಿನ ಪೋಷಕರಾಗಿ ಸನ್ಮಾನ ಸ್ವೀಕರಿಸಬೇಕಾಗಿ ಮನವಿ.. Date 25.1.26 Sunday Time 10am to 3pm place St Joseph Highschool,Jigani.. A warm welcome all welwishers of HosabelakuTrust on 20th Anniversary, Mega Health Camp & Hanour program. Welcome all.Regards

Saturday, November 29, 2025

HOSABELAKU TRUST: FREE EYE CHECKUP – CATARACT SURGERY – GENERAL CHEC...

HOSABELAKU TRUST: FREE EYE CHECKUP – CATARACT SURGERY – GENERAL CHEC...: FREE EYE CHECKUP – CATARACT SURGERY – GENERAL CHECKUP-DIABETES SCREENING – GENERAL CHECKUP,BREAST CANCER SCREENING & EYE ORGAN DONATION ...

FREE EYE CHECKUP – CATARACT SURGERY – GENERAL CHECKUP-DIABETES SCREENING – GENERAL CHECKUP,BREAST CANCER SCREENING & EYE ORGAN DONATION REGISTRATION & AWARENESS CAMP 30.11.25 AT Govt College,BOMMASANDRA,SARJAPUR RoaD,BANGALORE #jiganiramakrishna @jiganiramakrishna

FREE EYE CHECKUP – CATARACT SURGERY – GENERAL CHECKUP-DIABETES SCREENING – GENERAL CHECKUP,BREAST CANCER SCREENING & EYE ORGAN DONATION REGISTRATION & AWARENESS CAMP 30.11.25 AT Govt College,BOMMASANDRA,SARJAPUR RoaD,BANGALORE ಆತ್ಮೀಯ ಬಂಧುಗಳೇ.. ದೊಮ್ಮಸಂದ್ರದಲ್ಲಿ ಬೃಹತ್ ಆರೋಗ್ಯ ತಪಾಸಣೆ ಶಿಬಿರ. ದಿನಾಂಕ 30 11 2025 ಭಾನುವಾರ ಬೆಳಿಗ್ಗೆ 10ರಿಂದ ಮಧ್ಯಾಹ್ನ 2ಗಂಟೆವರೆಗೆ. ಸ್ಥಳ ಸರ್ಕಾರಿ ಕಾಲೇಜು,ಹೌಸಿಂಗ್ ಬೋರ್ಡ್ ಮುತ್ತನಲ್ಲೂರ್ ಕ್ರಾಸ್, ದೊಮ್ಮಸಂದ್ರ.. ಆರೋಗ್ಯ ಶಿಬಿರದ ಜೊತೆ ಕನ್ನಡ ರಾಜ್ಯೋತ್ಸವ ಆಚರಣೆ. ಶಿಬಿರದಲ್ಲಿ ನಾರಾಯಣ ನೇತ್ರಾಲಯದ ವೈದ್ಯರಿಂದ ಉಚಿತ ಕಣ್ಣಿನ ಪರೀಕ್ಷೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ಕನ್ನಡಕದ ಅಗತ್ಯವಿದ್ದವರಿಗೆ ಉಚಿತ ಕನ್ನಡಕದ ವ್ಯವಸ್ಥೆ ಶಿಬಿರದ ಆಯೋಜಕರಿಂದ.. ಆಕ್ಸ್ಫರ್ಡ್ ಆಸ್ಪತ್ರೆ ವತಿಯಿಂದ ಸಾಮಾನ್ಯ ರೋಗಗಳ ತಪಾಸಣೆ ಇಸಿಜಿ ENT ಮಕ್ಕಳ ತಜ್ಞರು ಸ್ತ್ರೀರೋಗ ತಜ್ಞರು ಮೂಳೆ ರೋಗ ಚರ್ಮರೋಗ ಇತರೆ ರೋಗಗಳ ಪರೀಕ್ಷೆ ಮತ್ತು ಉಚಿತ ಔಷಧಗಳ ವಿತರಣೆ.. ಭಯೋಕಾನ್ ಫೌಂಡೇಶನ್ ವತಿಯಿಂದ ಉಚಿತ ಸ್ತನ ಕ್ಯಾನ್ಸರ್ ಪರೀಕ್ಷೆ.. Breast cancer Screening. ಶಿಬಿರದ ಆಯೋಜಕರು ಶಿವಶಂಕರ್ ಅಧ್ಯಕ್ಷರು ಕರ್ನಾಟಕ ಜಾಗೃತ ದಳ ಮತ್ತು ಶ್ರೀ ಕಾವೇರಮ್ಮ ದೇವಸ್ಥಾನ ಸೇವಾ ಟ್ರಸ್ಟ್.. ಸಹಯೋಗ ಹೊಸಬೆಳಕು ಟ್ರಸ್ಟ್ ಶ್ರೀ ಸಾಯಿ ವಿನೋದ್ ಚಾರಿಟೇಬಲ್ ಟ್ರಸ್ಟ್. ದೊಮ್ಮಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹಾಗೂ ಸಂಘ ಸಂಸ್ಥೆಗಳು. ಹಿತೈಷಿಗಳು.. ನೀವು ಬನ್ನಿ ನಿಮ್ಮವರನ್ನು ಕರೆತನ್ನಿ ಆರೋಗ್ಯದ ತೊಂದರೆ ಇರುವ ಇತರರಿಗೂ ದಯಮಾಡಿ ತಿಳಿಸಿ. ಧನ್ಯವಾದಗಳೊಂದಿಗೆ ಡಾ. ಎಂ ರಾಮಕೃಷ್ಣ @ ಜಿಗಣಿ ರಾಮಕೃಷ್ಣ ಸಂಸ್ಥಾಪಕ ಅಧ್ಯಕ್ಷರು ಹೊಸ ಬೆಳಕೊಟ್ರಸ್ಟ್ 9945028899 ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಶಿಬಿರದಆಯೋಜಕರಿಗೂಪ್ರಾಯೋಜಕರಿಗೂಧನ್ಯವಾದಗಳುಸಾರ್ವಜನಿಕರುಶಿಬಿರದಪ್ರಯೋಜನವನ್ನುಪಡೆದುಕೊಳ್ಳಬೇಕಾಗಿಮನವಿ. ಹಾಗೆಯೇಅಗತ್ಯವಿದ್ದಇತರರಿಗೂತಿಳಿಸಿ . ಬುದ್ಧಭೀಮವಂಧನೆಗಳೊಂದಿಗೆ Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899 Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com #Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India

Friday, October 24, 2025

HOSABELAKU TRUST: Eye Donation Shree Chikka Muniyappa at Masthi Vill...

HOSABELAKU TRUST: Eye Donation Shree Chikka Muniyappa at Masthi Vill...: ಪತ್ರಿಕಾ ಪ್ರಕಟಣೆಗಾಗಿ : ಮಾಸ್ತಿಯಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ. 24.10.25 ಕೋಲಾರ ಜಿಲ್ಲೆ ಮಾಲೂರು ...

Eye Donation Shree Chikka Muniyappa at Masthi Village ಮಾಸ್ತಿಯಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ.24.10.25 @jiganiramakrishna

ಪತ್ರಿಕಾ ಪ್ರಕಟಣೆಗಾಗಿ : ಮಾಸ್ತಿಯಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ. 24.10.25 ಕೋಲಾರ ಜಿಲ್ಲೆ ಮಾಲೂರು ತಾಲೂಕು ಮಾಸ್ತಿ ಗ್ರಾಮದದಲ್ಲಿ ಹೋರಾಟಗಾರ್ತಿ ಜಯಮಾಲ ಅವರ ತಂದೆ ಚಿಕ್ಕಮುನಿಯಪ್ಪನವರು (84) ತಡರಾತ್ರಿ ವಯೋಸಹಜ ಖಾಯಿಲೆಯಿಂದ ಮೃತಪಟ್ಟಿದ್ದು, ಮೃತರ ಕಣ್ಣುಗಳನ್ನು ಮುಂಜಾನೆ 1ಗಂಟೆಯ ಸಮಯದಲ್ಲಿ ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ. ಮೃತರಮಗಳು ಜಯಮಾಲ ಕಂಬನಿ ಮಿಡಿಯುತ್ತಾ ನನ್ನ ತಂದೆಯ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ. ಜಗದ ಬೆಳಕು ಭಗವಾನ್ ಬುದ್ಧರು ನಮಗೆ ದಾರಿ ದೀಪ ಮತ್ತು ನೇತ್ರದಾನಿ ಪುನಿತ್‌ರಾಜಕುಮಾರ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಾವು ಕಳೆದುಕೊಂಡಿದ್ದು ನಮ್ಮ ಅಪ್ಪ ಒಬ್ಬರನ್ನು ಆದರೆ ಅವರ ಕಣ್ಣುಗಳು ನಾಲ್ಕುಜನರಲ್ಲಿ ಬದುಕಿರುತ್ತವೆ ನೇತ್ರದಾನಕ್ಕೆ ಡಾ.ರಾಜಕುಮಾರ್ ಕುಟುಂಬ ನಮಗೆ ಸ್ಪೂರ್ತಿ ಎಂದರು. ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡÀಬೇಕೆಂದು ಮೃತರ ಮಗ ಶಂಕರ್ ಅವರ ಕಳಕಳಿಯ ಪ್ರಾರ್ಥನೆ . ನೇತ್ರದಾನಕ್ಕೆ ಮನ ಒಲಿಸಿ, ಆಪರೇಷನ್ ಆಗಿದ್ದರೂ ಜೊತೆಯಲ್ಲಿ ನಿಂತು ನೇತ್ರದಾನ ಮಾಡಿಸಿದ್ದು ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ ಕುಟುಂಬ. ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ಮೃತ ಚಿಕ್ಕಮುನಿಯಪ್ಪನವರ ಮಕ್ಕಳಾದ ಜಯಮಾಲ,ಶಂಕರ್,ಪ್ರಕಾಶ,ಸೋಮೆಶ್,ಹರೀಶ,ಅಳಿಯರಾದ ಕೆಂಪಣ್ಣ, ಸೊಸೆಯಂದಿರು, ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ಮಂಜುಳಾರಾಮಕೃಷ್ಣ,ನಾರಾಯಣ ನೇತ್ರಾಲಯದ ಅಶೋಕ್ ಮತ್ತು ಕುಟುಂಬಸ್ಥ್ತರು ಹಾಜರಿದ್ದರು. ನೇತ್ರದಾನ– ಅಂಗಾಂಗ ದಾನ–ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ 24/7 ಕೆ.ಜೆ ಮೇಕಪ್ ಸ್ಟೂಡಿಯೋ 9964516171 ಹಾಗು ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ನೇತ್ರದಾನ– ಅಂಗಾಂಗ ದಾನ–ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಫೋಟೊ ಶೀರ್ಷಿಕೆ :1 ಶ್ರೀ ಚಿಕ್ಕಮುನಿಯಪ್ಪ ಫೋಟೊ ಶೀರ್ಷಿಕೆ : 2 ಮಕ್ಕಳಾದ ಜಯಮಾಲ,ಶಂಕರ್,ಪ್ರಕಾಶ,ಸೋಮೆಶ್,ಹರೀಶ,ಅಳಿಯರಾದ ಕೆಂಪಣ್ಣ, ಸೊಸೆಯಂದಿರು, ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ಮಂಜುಳಾರಾಮಕೃಷ್ಣ,ನಾರಾಯಣ ನೇತ್ರಾಲಯದ ಅಶೋಕ್ ಮತ್ತು ಕುಟುಂಬಸ್ಥ್ತರು