Monday, March 14, 2022
ಜಾನಪದ ಹಾಡುಗಳ ದಂತಕಥೆ ಹಿರಿಯಣ್ಣ ಜನಮನದ ಜಾನಪದವನ್ನು ವಿದೇಶಗಳಲ್ಲಿ ಗಾಯನ ಮಾಡಿದ ಹಿರಿಯಣ್ಣ ಎಂ.ಮಹದೇವಸ್ವಾಮಿಗೆ ಮೈಸೂರು ವಿವಿ ಗೌರವ ಗೌರವ ಡಾಕ್ಟರೇಟ್ ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಶುಭಾಶಯಗಳು.#Jigani_Ramakrishna #Jigani_Vinod #Hosabelaku_Trust #Sri_Sai_Vinod_Charitable_Trust #Donate_Organs_Eyes_Gift_LIFE #9945028899
ಜಾನಪದ ಹಾಡುಗಳ ದಂತಕಥೆ ಹಿರಿಯಣ್ಣ ಜನಮನದ ಜಾನಪದವನ್ನು ವಿದೇಶಗಳಲ್ಲಿ ಗಾಯನ ಮಾಡಿದ
ಹಿರಿಯಣ್ಣ ಎಂ.ಮಹದೇವಸ್ವಾಮಿಗೆ ಮೈಸೂರು ವಿವಿ ಗೌರವ ಗೌರವ ಡಾಕ್ಟರೇಟ್
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಶುಭಾಶಯಗಳು
ಡಾಕ್ಟರೇಟ್ ಪದವಿಗೆ ಹಾಗೂ ಮೈಸೂರು ವಿಶ್ವವಿದ್ಯಾಲಯದ ಗೌರವವೂ ಹೆಚ್ಚಾಯಿತು
ಜಾನಪದ ಹಾಡುಗಳ ದಂತಕಥೆಗೆ ಮೈಸೂರು ವಿವಿ ಗೌರವ ಡಾಕ್ಟರೇಟ್
"ಹಾಡಿದವರ ಮನವಾ ಬಲ್ಲೆ
ನೀಡಿದವರ ನಿಜವಾ ಬಲ್ಲೆ
ಸಿದ್ದಯ್ಯ ಸ್ವಾಮಿ ಬನ್ನಿ"
ಗೀತೆಗಳ ಸರಣಿಯಿಂದ ಹಿಡಿದು ಇತ್ತೀಚಿನ ದಿನಗಳ
"ಮಾದೇಶ್ವರ ದಯಬಾರದೇ
ಬರಿದಾದ ಬಾಳಲ್ಲಿ ಬರಬಾರದೇ
ನೀನಿಲ್ಲದೇ ನನಗೆ ಬದುಕೆಲ್ಲಿದೆ"?
ಗೀತೆಗಳವರೆಗೆ ನೂರಾರು ಜಾನಪದ ಗೀತೆಗಳು, ಕಥಾಪ್ರಸಂಗಗಳನ್ನು ಹಾಡಿರುವ, ಹಾಡುತ್ತಲೇ ಇರುವ ಮಹದೇವಸ್ವಾಮಿ ಅವರು ಕ್ಯಾಸೆಟ್ಟುಗಳ ಮೇಲೆ ಕೃಷ್ಣಾಪುರ ಎಂ.ಮಹದೇವಸ್ವಾಮಿ ಎಂದು ಬರೆದುಕೊಂಡರೆ, ಇವರ ಹಾಡಿನ ಮೋಡಿಗೆ ಬೆರಗಾದ ಅಭಿಮಾನಿಗಳು ಇವರನ್ನು ಮಳವಳ್ಳಿ ಮಹದೇವಸ್ವಾಮಿ ಎಂದು ಕರೆಯುತ್ತಾರೆ. ಇಂತಹ ದೇಶಿ ಪ್ರತಿಭೆಗೆ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ಪ್ರಕಟಿಸಿದ್ದು, ಮಾರ್ಚ್ 22 ರಂದು ನಡೆಯಲಿರುವ ಘಟಿಕೋತ್ಸವದಲ್ಲಿ ಜನಮನದ ಜಾನಪದ ಗಾಯಕ ಮಹದೇವಸ್ವಾಮಿಯವರು ಇನ್ಮುಂದೆ ಡಾ.ಮಹದೇವಸ್ವಾಮಿಯಾಗಲಿದ್ದಾರೆ.
90 ರ ದಶಕವೆಂದರೆ ಅದು ಟೇಪ್ ಕ್ಯಾಸೆಟ್ಟುಗಳ ಜಮಾನ. ಆಗ ಮನೆ ಮನೆಗಳಲ್ಲೂ ಮಂಟೇಸ್ವಾಮಿ, ಸಿದ್ದಪ್ಪಾಜಿ, ಶರಣೆ ಶಂಕಮ್ಮ, ಮಾಯ್ಕಾರ ಮಾದಪ್ಪ, ಮೈದಾಳ ರಾಮ, ನಂಜುಂಡೇಶ್ವರ ಕಥಾಪ್ರಸಂಗ, ಬಿಳಿಗಿರಿರಂಗಯ್ಯ, ಮುಡುಕುತೊರೆ ಮಲ್ಲಪ್ಪ ಹೀಗೆ ಜಾನಪದ ಹಿನ್ನೆಲೆಯುಳ್ಳ ಹತ್ತಾರು ಕಥಾ ಪ್ರಸಂಗಗಳ, ಹಲವಾರು ಭಾಗಗಳುಳ್ಳ ಕ್ಯಾಸೆಟ್ಟುಗಳು ಟೇಪ್ ರೆಕಾರ್ಡರ್ ಹೊಂದಿದ್ದವರ ಪ್ರತಿಯೊಬ್ಬರ ಮನೆಗಳಲ್ಲೂ ಇರುತ್ತಿದ್ದವು. ಇದು ಒಂದು ವರ್ಗದ ಕೇಳುಗರನ್ನು ಸೃಷ್ಟಿ ಮಾಡಲು ಯಶಸ್ವಿಯಾದಾಗ, ಯುವ ಸಮೂಹವನ್ನು ಸೆಳೆಯುವ ಸಲುವಾಗಿ ಸಿನಿಮಾ ಶೈಲಿಯ ಜಾನಪದ ಹಾಡುಗಳನ್ನು ಇವರ ಸಹೋದರ ಎಂ.ನಾಗೇಂದ್ರ ಅವರ ರಚನೆಯಲ್ಲಿ ತಾವೂ ಹಾಡುತ್ತ, ಇತರ ಗಾಯಕರಿಂದಲೂ ಹಾಡಿಸುತ್ತಾ ಬಂದರು. ಅವುಗಳಲ್ಲಿ " ಹೆಣ್ಣಿಗೆ ಬೇಕು ತಾಳಿ, ಆ ತಾಳಿಯೇ ಹೆಣ್ಣಿಗೆ ಬೇಲಿ, ಒಂಬತ್ತು ತಿಂಗಳು ಹೊತ್ತು ಸಾಕಿದ ತಾಯ ಮರೆಯಬೇಡ, ಬಸ್ಸತ್ತುವಾಗ ನೀನು ಉಸ್ಸೋ ಅಂತ ಹತ್ತಿಯಲ್ಲ, ಇಂಚೋರ್ ಬಂದು ನಾ ಏನ್ ಮಾಡ್ದೆ" ಈ ಶೈಲಿಯ ಹತ್ತಾರು ಕ್ಯಾಸೆಟ್ ಗಳು ಆಗ ಮಾರುಕಟ್ಟೆಯಲ್ಲಿ ಹವಾ ಎಬ್ಬಿಸಿದ್ದನ್ನು ಮರೆಯಲಾದೀತೆ? ಈ ಕಾರಣಕ್ಕೆ ಇಂದಿಗೂ ಹಳೆ ಮೈಸೂರು ಭಾಗದಲ್ಲಿ ಮಹದೇವಸ್ವಾಮಿಯವರು ಜಾನಪದ ದಂತಕಥೆ!
ಹಾಗಂತ ಮಹದೇವಸ್ವಾಮಿಯವರೇನೂ ಹುಟ್ಟು ಶ್ರೀಮಂತರಲ್ಲ, ಇಂದು ಅವರು ಹಣ, ಮನೆ, ಕಾರು, ಒಡವೆ ಎಂದು ಸಿರಿವಂತಿಕೆಯಿಂದ ಬದುಕುತ್ತಿದ್ದರೆ ಅದಕ್ಕೆ ಕಾರಣ ಇವರೊಳಗಿನ ಕಲೆ. ಗ್ರಾಮೀಣ ಹಾಗೂ ನಗರ ಪ್ರದೇಶ ಎಂಬ ಭೇದವಿಲ್ಲದೇ, ಯಾರೇ ಅಭಿಮಾನವಿಟ್ಟು ಕರೆದರೆ ಅದು ಊರಿನವರ ಕಾರ್ಯಕ್ರಮವಾಗಲಿ, ಯಾರದೋ ಮನೆಯವರ ಖಾಸಗಿ ಕಾರ್ಯಕ್ರಮ ಆಗಲಿ, ಅಲ್ಲಿ ಮಹದೇವಸ್ವಾಮಿಯವರ ಗಾಯನ ಇರುತ್ತಿತ್ತು. ಆ ವೇದಿಕೆ ಇವರಿಗೆ ಹಣ, ಕೀರ್ತಿ ಎಲ್ಲವನ್ನೂ ತಂದುಕೊಟ್ಟಿದೆ.
ಆಕಾಶವಾಣಿಯ ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಮಹದೇವಸ್ವಾಮಿಯವರೇ ಹೇಳಿಕೊಂಡಂತೆ, "ಮನೆಯಲ್ಲಿ ಬಡತನವಿತ್ತು. ಹೆಚ್ಚು ಓದದ, ದೇವರ ಗುಡ್ಡನಾದ ನಾನು ಮಳವಳ್ಳಿ ಬಸ್ ನಿಲ್ದಾಣದಲ್ಲಿ ಹಾಡುತ್ತ, ಪ್ರಯಾಣಿಕರಿಂದ ಚಿಲ್ಲರೆ ಕಾಸಿಗಾಗಿ ಹಾಡ್ತಾ ಇದ್ದೆ. ಒಂದಷ್ಟು ಕಾಸು ಸೇರಿಸಿಕೊಂಡು ಕ್ಯಾಸೆಟ್ ಮಾಡಿದೆ. ಅದು ನನ್ನನ್ನ ಕೈ ಹಿಡೀತು" ಎಂದಿದ್ದರು.
ಇಂತಹ ಮಹದೇವಸ್ವಾಮಿಯವರು ಇಂದಿಗೂ ಸಹ ಬತ್ತದ ಸೆಲೆ. ಕೈಯಲ್ಲಿ ತಂಬೂರಿ ಹಿಡಿದು, ಮತ್ತೊಂದು ಕೈಯಲ್ಲಿ ಗಗ್ರ ನುಡಿಸುತ್ತಾ ಹಾಡಲು ಕುಂತರೆಂದರೆ ಹಗಲು ರಾತ್ರಿ ಎರಡನ್ನೂ ಒಂದು ಮಾಡುತ್ತಾರೆ. ಯಾವುದೋ ನಕಲಿ ವಿವಿ ಗಳು ಕೊಟ್ಟಂತಹ ಅಥವಾ ಪಡೆದುಕೊಂಡ ಗೌರವ ಡಾಕ್ಟರೇಟ್ ಗಳನ್ನು ಹೆಸರಿನ ಮುಂದೆ ಹಾಕಿಕೊಳ್ಳುವ ಜನರನ್ನು ನಾವು ನೋಡ್ತಾ ಇದೀವಿ. ಇದೀಗ ಪ್ರತಿಷ್ಠಿತ ಮೈಸೂರು ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನ್ನು ಮಹದೇವಸ್ವಾಮಿಯವರಂತಹ ಮೇರು ಜಾನಪದ ಗಾಯಕನಿಗೆ ನೀಡಿರುವುದು ಶ್ಲಾಘನೀಯ. ಹಾಗೆಯೇ ವಿವಿಯು ಮಹದೇವಸ್ವಾಮಿಯವರನ್ನು ಕುರಿತು ಪಠ್ಯವನ್ನೂ ಅಳವಡಿಸುವುದು ಸೂಕ್ತ ಅನ್ನೋದು ನನ್ನ ಅಭಿಪ್ರಾಯ.
- ಗೌಡಹಳ್ಳಿ ಮಹೇಶ್
#Having_Adhar_Card_Aadhar_Connected_Mobile_Number_Anywhere_in_INDIA_Can_get_COVID_VACCINATION_FREE
#ಭಾರತದ_ಯಾವುದೇ_ಸ್ಥಳ_ಊರಿನಲ್ಲಾದರೂ_ಕರೋನಾ_ವ್ಯಾಕ್ಸಿನ್_ಪಡೆಯಬಹುದು_ಆಧಾರ್_ಕಾರ್ಡು_ಮತ್ತು_ಆಧಾರ್_ಕಾರ್ಡು_ಜೋಡಿತ_ಮೊಬೈಲ್_ಇದ್ದರೆಸಾಕು
ಹೊಸಬೆಳಕು ಟ್ರಸ್ಟ್(ರಿ ) & ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ ) ವತಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಕಟಣೆ
ಜೀವಗಳ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
This Life Saving Information helps both Patients and also a Medical Staff.
Do not ignore to Share this ..
This information helps someone in Emergency Medical Need.
#Fight_Againist_CORONA
#Follow_CORONA_Rules
#Stay_Safe_Stay_Healthy
#Maintain_SMS_Sanitize_Mask_Socialdistance
#Help_the_Community_IF_Possible
#Join_Hands_with_Corona_Warriors_to_Prevent_CORONA
#Respect_Corona_Warriors_and_who_works_For_PUBLIC_Welfare
#Co_operate_with_Police_to_Prevent_Crimes
Thanks to #BBMP #Chief_Minister_of_Karnataka #Health_Minister_of_Karnataka #BBMP_Commissionor
#kannadaprabha #Vijayavani #Vishwavani #Udayavani #Prajavani #Suvarna_times_of_karnataka #Samyukta_karnataka #Btv #Udayatv #Tv9Karnataka #Digvijaya #StarSuvarna #ZeeKannada #TV5 #PublicTV #KasturiTV #SuvarnaNews24/7 #RajNews #AmoghTV #News1st #Etv_Bharath #vaarthabharathi #Press_Club_of_Bangalore #WHO #KMC #IMA
#HIV_Testing #ictc #KnowYour_HIVStatus #stayinformed #DIAL_1097 #NACO #HIV_Awareness #AIDS_Awareness #HIV #AIDS #AzadiKaAmritMahotsav #NACOApp #HIVawareness #Karnataka_State_AIDS_Prevention_Society #NACOApp
If Media or Somebody needs Soft copy of Details please call me, I will mail it 9945028899
ನಲ್ಮೆಯ ಬಂಧುಗಳೇ .
ಹೊಸಬೆಳಕು ಟ್ರಸ್ಟ್(ರಿ)-ಕತ್ತಲೆಯಿಂದ ಬೆಳಕಿನಡೆಗೆ ಎಂಬ ದ್ಯೇಯವಾಕ್ಯದೊಂದಿಗೆ
ಶ್ರೀ ಸಾಯಿ ವಿನೋದ್ ಚಾರಿಟಬಲ್ ಟ್ರಸ್ಟ್(ರಿ)-ನೊಂದ ಸಮಾಜದತ್ತ ಎಂಬ ದ್ಯೇಯವಾಕ್ಯದೊಂದಿಗೆ ಪ್ರಾರಂಬಿಸಿ ಹಲವಾರು ಸಮಾಜಿಕ ಕಾರ್ಯಕ್ರಮಗಳನ್ನು ನಡೆಸಿ ಕೊಂಡು ಬರುತ್ತಿರುವುದು ತಮಗೆಲ್ಲಾ ತಿಳಿದ ವಿಷಯ.
ನೊಂದ ಸಮಾಜಕ್ಕೆ ಮತ್ತು ಕತ್ತಲೆಯಿಂದ ಬೆಳಕಿನಡೆಗೆ ಪಯಣದಲ್ಲಿ ಕರ್ನಾಟಕ ರಾಜ್ಯದ ಜಿಲ್ಲಾವಾರು ಸರ್ಕಾರಿ.ಖಾಸಗಿ ಆಸ್ಪತ್ರೆಗಳು ಮತ್ತು ಮೆಡಿಕಲ್ ಕಾಲೇಜುಗಳು ಹಾಗು ರಕ್ತನಿಧಿಗಳ ಸಂಪರ್ಕ ಮಾಹಿತಿ ,ಬೆಡ್ಡುಗಳ ಖಾಲಿ ಇರುವಿಕೆ..ವಾರ್ ರೂಮ್ ಮಾಹಿತಿ,ರಕ್ತದ ವ್ಯವಸ್ತೆ,ಆಕ್ಸಿಜನ್ ಮಾಹಿತಿ..ಅಂಬುಲೆನ್ಸ್ ಮಾಹಿತಿ ಇತರೆ ಸರ್ಕಾರದ ಕರೋನಾ ತಡೆಗಟ್ಟುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸುತ್ತಾ ಬರುತ್ತಿದ್ದೇವೆ.ಹಾಗು
ಕರ್ನಾಟಕ ರಾಜ್ಯದಾದ್ಯಂತಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಹಾಗು ರಕ್ತ ನಿದಿಗಳಲ್ಲಿ ಇಂದು ಲಭ್ಯವಿರುವ ರಕ್ತ / ಕೆಂಪು ರಕ್ತ ಕಣ/ಕಾಂಪೋನೆಂಟ್ಸ್/ಪ್ಲೇಟ್ಲೆಟ್ಸ್ ಗಳ ಮಾಹಿತಿಯನ್ನು ಕಲೆಹಾಕಿ ಸಮಾನ್ಯ ನಾಗರೀಕರಿಗೆ ಪ್ರಯೋಜನವಾಗುವ ರೀತಿಯಲ್ಲಿ Face Book / Watsup / Tweeter /Hosabelautrust Blog ನಲ್ಲಿ ಪ್ರಕಟಿಸುತ್ತಿದ್ದೇವೆ.
ರಕ್ತವು ದೊರೆಯದೆ ಯಾವ ತಾಯಿಯೂ ಮರಣಿಸುವುದು ಬೇಡಾ.
ಈ ಜೀವ ಉಳಿಸುವ ಮಾಹಿತಿಯನ್ನು ದಯಮಾಡಿ ಶೇರ್ ಮಾಡಿ ಖಂಡಿತ ಪ್ರಾಣಗಳ ಉಳಿಸಬಲ್ಲದು.
Kindly Share this message definitely it saves someone.
ನಮ್ಮಗಳ ಪ್ರಯತ್ನಕ್ಕೆ ನಿಮ್ಮಗಳ ಸಹಕಾರವಿರಲಿ
#Fight_Againist_CORONA
#ಹೊಸಬೆಳಕು_ಟ್ರಸ್ಟ್ #ಶ್ರೀ_ಸಾಯಿ_ವಿನೋದ್_ಚಾರಿಟಬಲ್_ಟ್ರಸ್ಟ್
ಬುದ್ಧ ಭೀಮ ವಂಧನೆಗಳೊಂದಿಗೆ
Dr.Ramakrishna.M @ JiganiRamakrishna Founder_Managing_Trustee #Hosabelaku_Trust 9945028899
Mr.Jigani Vinod.M Councilor Ward No 22 – Jigani Purasabha. Founder_ManagingTrustee #Sri Sai Vinod_Charitable_Trust 9036800123
Thanks & Regards Dr.M.RAMAKRISHNA ( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha & Dr.B.R.Ambedkar National Fellowship Awardee. Salumara Thimmakka International Greenery Ward 2019. And many more....Address : Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ ) ಜಿಗಣಿ No.105. Hosabelaku Nilaya.Near Balaji Nagar Water Tank.Ward No 5.Yallammadevi Nagar.JIGANI (Village & Post) Anekal Talluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.com jiganiramakrishna@gmail.com #Donate_Organs_Gift_Life #Donate_Eyes_Gift_Sight #Donate _Blood_Save Life, Plant Tree - Save Nation. #ORGAN_EYE_BLOOD_Donation_be_a_Family_Tradition
Subscribe to:
Post Comments (Atom)
No comments:
Post a Comment