Thursday, December 14, 2023
ಪತ್ರಿಕಾ ಪ್ರಕಟಣೆಗಾಗಿ – ಬನ್ನೇರುಘಟ್ಟದಲ್ಲಿ ಮೊದಲಿಯಾರ್ ಕುಟುಂಬದ ನೇತ್ರದಾನ ದಿ.ಈಶ್ವರ ಮೊದಲಿಯಾರ್ ಅವರ ಧರ್ಮಪತ್ನಿ ಶ್ರೀಮತಿ ಅಮರಾವತಮ್ಮ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ. 14.12.23 #Jigani_Ramakrishna #Dr_M_Ramakrishna #Hosabelaku_Trust #Donate_Organs_Eyes_Gift_LIFE #for_Donations24HrsHelpLine9945028899
ಪತ್ರಿಕಾ ಪ್ರಕಟಣೆಗಾಗಿ – ಬನ್ನೇರುಘಟ್ಟದಲ್ಲಿ ಮೊದಲಿಯಾರ್ ಕುಟುಂಬದ ನೇತ್ರದಾನ ದಿ.ಈಶ್ವರ ಮೊದಲಿಯಾರ್ ಅವರ ಧರ್ಮಪತ್ನಿ ಶ್ರೀಮತಿ ಅಮರಾವತಮ್ಮ ಅವರ ನೇತ್ರದಾನ ನಾರಾಯಣ ನೇತ್ರಾಲಯಕ್ಕೆ.
ಬನ್ನೇರುಘಟ್ಟ : ದಿನಾಂಕ 14.12.2023 ಬೆಳಿಗ್ಗೆ 9 ಗಂಟೆಯ ಸಮಯದಲ್ಲಿ ಬನ್ನೇರುಘಟ್ಟದ ದಿ.ಈಶ್ವರ ಮೊದಲಿಯಾರ್ ಅವರ ಧರ್ಮಪತ್ನಿ ಶ್ರೀಮತಿ ಅಮರಾವತಮ್ಮ ನವರು 95 ವರ್ಷ ವಯೋಸಹಜ ಖಾಯಿಲೆಯಿಂದ ಮನೆಯಲ್ಲಿ ಮೃತಪಟ್ಟಿದ್ದು ಮೃತರ ಕಣ್ಣುಗಳನ್ನು ಬೆಂಗಳೂರಿನ ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.
ಮೃತರ ಮೊಮ್ಮಗ ಪ್ರದೀಪ್ ಕುಮಾರ್ ಕಂಬನಿಮಿಡಿಯುತ್ತಾ ನನ್ನ ಅಜ್ಜಿಯ ನೇತ್ರದಾನ ನೇತ್ರದಾನ ನಮ್ಮ ಕುಟುಂಬದ ಹೆಮ್ಮೆ ಮತ್ತು ಸಂತಸ ತಂದಿದೆ ನನ್ನ ಅಜ್ಜಿಯ ಕಣ್ಣುಗಳು ನಾಳೆ ಯಾರದೋ ಇಬ್ಬರು ಕಾರ್ನಿಯಾ ಅಂಧರ ಮನೆಯಲ್ಲಿ ಬೆಳಗುತ್ತವೆ ಎಂದರು.
ಮೃತರ ಕುಟುಂಬಸ್ತೆ ಶ್ರೀಮತಿ ನಾಗರತ್ನ ಮಾತನಾಡುತ್ತ ನೇತ್ರದಾನಿ ಪುನಿತ್ ರಾಜಕುಮಾರ್ ನಮಗೆ ಮಾದರಿ ಅವರು ಇಂದು ನಾಲ್ಕು ಜನ ಅಂಧರಿಗೆ ಬೆಳಕು ನೀಡಿ ಅಮರರಾಗಿದ್ದಾರೆ, ನಾವು ಕಳೆದುಕೊಂಡಿದ್ದು ಒಬ್ಬರನ್ನು ಆದರೆ ಅವರ ಕಣ್ಣುಗಳು ನಾಲ್ಕುಜನರಲ್ಲಿ ಬದುಕಿರುತ್ತವೆ ಎಂದರು.
ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡÀಬೇಕೆಂದು ಮತ್ತೊಬ್ಬ ಮೊಮ್ಮಗ ಸೋಮು ಅವರ ಕಳಕಳಿಯ ಪ್ರಾರ್ಥನೆ .
ನೇತ್ರದಾನ ಕಾಯಕದಲ್ಲಿ ಜೊತೆಯಾದದ್ದು ಪ್ರದೀಪ್ ಕುಮಾರ್,ಬಾಬಣ್ಣ,ಸೋಮು,ಶ್ರೀಮತಿ ನಾಗರತ್ನ, ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ(ಜಿಗಣಿರಾಮಕೃಷ್ಣ) ನಾರಾಯಣ ನೇತ್ರಾಲಯದ ವೈದ್ಯರಾದ ಡಾ.ಪ್ರಬಿತ,ಅಶೋಕ್ ಮತ್ತು ಕುಟುಂಬಸ್ಥ್ತರು ಹಾಜರಿದ್ದರು.
ನೇತ್ರದಾನ – ಅಂಗಾಂಗ ದಾನ – ದೇಹ ದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ಫೋಟೊ ಶೀರ್ಷಿಕೆ : 1 ಮೃತರ ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಕುಟುಂಬದ ಹಿರಿಯರಾದ ಶ್ರೀಮತಿ ನಾಗರತ್ನ,ಮೊಮ್ಮಕ್ಕಳಾದ ಪ್ರದೀಪ್ ಕುಮಾರ್,ಸೋಮು ಹೊಸಬೆಳಕು ಟ್ರಸ್ಟಿನ ಡಾ.ಎಂ.ರಾಮಕೃಷ್ಣ(ಜಿಗಣಿರಾಮಕೃಷ್ಣ) ನಾರಾಯಣ ನೇತ್ರಾಲಯದ ವೈದ್ಯರಾದ ಡಾ.ಪ್ರಬಿತ ಮತ್ತು ಅಶೋಕ್
ಫೋಟೊ ಶೀರ್ಷಿಕೆ : 2 ಶ್ರೀಮತಿ ಅಮರಾವತಮ್ಮ
Subscribe to:
Post Comments (Atom)
No comments:
Post a Comment