Friday, January 31, 2014

26.1.2014 Sunday Eye Donation Programme & Eye Donation Awareness Programme Held at.Country Club.Gottigere...Evenet : Vidyanajali School Annual Day Celebration......53 People Filled Eye Donation Applications...2000 Donation Awareness Hand bills Distributed to all Parents at the Event....
Thanks to Mr.Umashankar Secretary of Vidhyanjali School....
Hosabelaku trust Jigani Ramakrishna 9945028899

Friday, January 24, 2014

Free Eye Checkup & Surgery Camp ( free Spectacles) on 26.1.2014 at Dodda Alahalli






Dear beloved
Hosabelaku Trust organised
Eve of 65th Republic day Celebration
Free Eye Checkup & Surgery Camp ( free Spectacles)
on 26.1.2014 Time 9 to 2 Pm
at Govt,High School.Dodda Alahalli,Satanur Road.kanakapura Taluk.

by.M/S.Narayan Neytralya, Bommasandra,Health City.Bangalore-100.

Great Opportunity for People with Vision Problem.
we request utilize this opportunity and intime the needy....

ಪ್ರಿಯ ಬಂದುಗಳೆ.
ಹೊಸಬೆಳಕು ಟ್ರಸ್ಟ್
65ನೇ ಗಣರಾಜ್ಯೋತ್ಸವ ಹಾಗು ಸಂವಿದಾನ ದಿನಾಚರಣೆ ಪ್ರಯುಕ್ತ..
ಉಚಿತ ಕಣ್ಣು ಪರೀಕ್ಷೆ ಮತ್ತು ಶಸ್ತ್ರಚಿಕಿತ್ಸಾ ಶಿಬಿರ ಹಾಗು ಉಚಿತ ಕನ್ನಡಕ ವಿತರಣೆ
ತಾ...26.1.2016 ರಂದು ಬಾನುವಾರ ಸಮಯ 9ರಿಂದ 2 ಗಂಟೆ...
ಸ್ಥಳ : ಸರ್ಕಾರಿ ಪ್ರೌಡ ಶಾಲೆ,ದೊಡ್ಡ ಆಲಹಳ್ಳಿ..ಸಾತನೂಋ ರಸ್ತೆ.ಕನಕಪುರ ತಾಲ್ಲೂಕು..
ನಾರಾಯಣ ನೇತ್ರಾಲಯ,ಬೊಮ್ಮಸಂದ್ರ,ಹೆಲ್ತ್ ಸಿಟಿ,ಬೆಂಗಳೂರು - 100
ಇವರ ನುರಿತ ವೈಧ್ಯರ ತಂಡದಿಂದ...
ಕಣ್ಣಿನ ತೊಂದರೆ ಇರುವವರಿಗೆ ಸುವರ್ಣಾವಕಾಶ...
ನೀವೂ ಬನ್ನಿ...ಕಣ್ಣಿನ ತೊಂದರೆ ಇದ್ದವರನ್ನೂ ಕರೆತನ್ನಿ..ಹೇಳಿ ಕಳಿಸಿ...
ಸೂಕ್ತ ಚಿಕಿತ್ಸೆ ಕೊಡಿಸೋಣ...ಅಂಧತ್ವ ನಿವಾರಿಸೋಣ....
ಹೊಸಬೆಳಕು ನೀಡೋಣ.....
.ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


Thursday, January 23, 2014

Blood King Krishna Singh....

ಬ್ಲಡ್ ಕಿಂಗ್..ರಕ್ತದಾನಿ ಸಿಂಗ್ ಇನ್ನಿಲ್ಲ

ಸಾವಿರಾರು ಜನರನ್ನು ರಕ್ತ ನೀಡಿ ಪ್ರಾಣ ಉಳಿಸಿದ ಸಮಾಜ ಸೇವಕ ಹಾಗೂ ನಮ್ಮೆಲ್ಲರ ಸೇವೆಯ ಸ್ಪೂರ್ತಿ  ರಕ್ತದಾನಿ ಸಿಂಗ್ ಎಂದೇ ಖ್ಯಾತರಾಗಿದ್ದ ಪೊಲೀಸ್ ಕೃಷ್ಣಸಿಂಗ್ ಸ್ವಾಶಕೋಶದ ತೊಂದರೆಯಿಂದ ನಿನ್ನೆ ಬೆಳಿಗ್ಗೆ 8.30 ರಲ್ಲಿ ಕಿಮ್ಸ್ ಆಸ್ಪತ್ರೆ ಬೆಂಗಳೂರು ಇಲ್ಲಿ ಕೊನೆಯುಸಿರೆಳೆದರು.
4995 ಜನಕ್ಕೆ ರಕ್ತವನ್ನು ನೀಡಲು ಸಹಕರಿಸಿದ್ದ ಸಿಂಗ್ ,ಟ್ರಾಪಿಕ್ ಸಬ್ ಇನ್ಸ್ಪೆಕ್ಟರ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ಕಳೆದ ಜುಲೈನಲ್ಲಿ ನಿವ್ರತ್ತಿ ಹೊಂದಿದ್ದರು.
ಎಂದೂ ಯಾವುದೇ ವಾಹನ ಸವಾರರಿಗೂ ಒಂದು ರೂ ಕೂಡ ಪಡೇಯದೆ ಅವರಿಗೆ ಫೈನ್ ಹಾಕುವುದರ ಬದಲಿಗೆ ಅವರ ಬ್ಲಡ್ ಗ್ರೂಪ್ ಪಡೆಯುವ ಮೂಲಕ ೫ ಸಾವಿರ ಜನರಿಗೆ ರಕ್ತ ಒದಗಿಸುವುದು ತನ್ನ ದೊಡ್ಡ ಆಸೆ ಎಂಡು ಹಲವಾರು ಬಾರಿ ಹೇಳಿದ್ದರು,ಆದರೆ ಇನ್ನು 5 ಜನರಿಗೆ ರಕ್ತ ನೀಡುವ ಮುನ್ನವೇ ಅವರು ಇಹಲೋಕವನ್ನು ತ್ಯಜಿಸಿ ತನ್ನ ಕೊನೆಯ ಆಸೆಯನ್ನು ಈಡೇರಿಸಲು ಸಾದ್ಯವಾಗಿಲ್ಲ.
    ಇತ್ತೀಚೆಗಷ್ಟೆ ಜಿಗಣಿಯ ಹಾರಗದ್ದೆಯಲ್ಲಿ ನಡೆದ ೭ನೇ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ವಿಶೇಷ ಸನ್ಮಾನಿತರಲ್ಲಿ ನಾನೂ ಮತ್ತು ಕೃಷ್ಣಸಿಂಗ್ ಜೊತೆಯಲ್ಲಿ ಸನ್ಮಾನ ಮಡಿಸಿಕೊಂಡಿದ್ದು ನನ್ನ ಪುಣ್ಯ...ಅಂದು ಸಹಾ ನೇತ್ರದಾನದ ಮಾಹಿತಿ ಇರುವ ಕರಪತ್ರವನ್ನು ಬಂದಿದ್ದ ಎಲ್ಲರಿಗೂ ಇಬ್ಬರೂ ಸೇರಿ ವಿತರಿಸಿದೆವು..
ಆಗ ಹೇಳಿದ ಮಾತು...ನನ್ನನ್ನು ಆಣ್ಣಾ ಎಂದು ಕರೆಯುತ್ತಿದ್ದರು...ರಾಮಕೃಷ್ಣಣ್ಣಾ...ನನಗೆ ವಯಸಾಗ್ಥಿದೆ....ನೀವು ಯುವಕ್ರು ನಿಮಗೆ ಹೆಚ್ಚಿನ ಜವಬ್ದಾರಿಯಿದೆ....ನಾನೇನಾದರೂ....ಸತ್ತೋದ್ರೆ ನನ್ನ ಕಣ್ಣುಗಳನ್ನು ದಮಮಾಡಿ ದಾನ ಮಾಡಿಸಿ ಎಂದು.....
22.1.2014 ಸಮಯ  8.45 ಅವರ ಮಗಳು ಶ್ರೀಮತಿ.ಶ್ರೀದೇವಿ..ಕರೆಮಾಡಿ ಸಾರ ಅಪ್ಪಾಜಿ ತೀರ್ಕೊಂದ್ರು ಅಂದ್ರು...ದೈರ್ಯತಗೊಳಿಮಾ...ಅಪ್ಪಾಜಿಯವರ ಕೊನೆ ಆಸೆ ನೆತ್ರದಾನ ಮಾಡೊದು ಎಂದು ನಾನ್ನೊಡನೆ ಹೇಳಿದ್ರು...ನೋವು ಅರ್ಥಾ ಆಗ್ತಿದೆ...ದಯಮ್ಮಡಿ ನೇತ್ರದಾನ ಮಾದಿಸಿ ಪ್ಲೀಸ್ ಅಂದೆ...
ಅಂತೆಯೇ ಕ್ಕಿಮ್ಸ್ ಆಸ್ಪತ್ರೆಗೆ ನೇತ್ರದಾನ ಮಾಡಿದ್ದಾರೆ...

ಶ್ರೀ.ಕೃಷ್ಣ ಸಿಂಗ್ ಸತ್ತಿಲ್ಲ ತನ್ನೆರಡು ಕಣ್ಣುಗಳನ್ನು ದಾನ ಮಾಡಿ..ಇಬ್ಬರಲ್ಲಿ ಬದುಕಿದ್ದಾರೆ....ಆ ...ಇಬ್ಬರು...ಇನ್ನೈವತ್ತು ವರುಷ ಬದುಕಿದರೆ...ಅಸ್ಟು ದಿನಗಳೂ...ಸಿಂಗ್ ಬದುಕಿರ್ತಾರೆ

ಅವರ ಮಗ 9.30 ರಲ್ಲಿ ಕರೆಮಾಡಿ ಸಾರ ದೇಹದಾನ ಸಹಾ ಮಾಡಬಹುದಾ ಎಂದರು....ಇಲ್ಲಪ್ಪ ಅದಕ್ಕೆ ಅವರು ಬದುಕಿರುವಾಗಲೆ ಅರ್ಜಿತುಂಬಿಸಬೇಕಾಗಿತ್ತು ಇಗ ಆಗುವುದಿಲ್ಲ ಎಂದೆ...

ದೇಹ ದಾನ ಮಾಡುವ ಯೋಚನೆ ಮಾಡುವ ಹಂತಕ್ಕೆ ಸಿಂಗ್ ಕುಟುಂಬದವರು ಬಂದಿದ್ದಾರೆ ಎಂದರೆ...ಅವರದು ಎಂತಹಾ ಸೇವಾಮನೋಭಾವ ಇರುವ ಕುಟುಂಬ ಅಲ್ಲವೆ....

ಅವರು ಮಡದಿ ಮಗ,ಇಬ್ಬರು ಹೆಣ್ನುಮಕ್ಕಳು ಮತ್ತು ಸವಿರಾರು ರಕ್ತದಾನಿಗಳನ್ನು ಅಗಲಿದ್ದಾರೆ...
ಅವರ ಆತ್ಮಕ್ಕೆ ಶಾಂತಿ ಸಿಗಲಿ...ಅವರ ಕುಟುಂಬದವರಿಗೆ ಬಗವಂತ ಆಯುರಾರೊಗ್ಯ ಐಶ್ವರ್ಯ ನೀದಲಿ ಎಂದು ಸಮಸ್ತ ಹೊಸಬೆಳಕು ಟ್ರಸ್ತ್ ಪರವಾಗಿ ಪ್ರಾರ್ಥನೆ..

ರಿಟೈರ್ ಆದರೂ 60.000 ರೂ ಸಾಲ ನೆಂಟರಿಗೆ ನೀಡಬೇಕು..ನನ್ನಮರಣಾ ನಂತರವೂ..ನನ್ನ ಮಗ ನನ್ನ ಸೇವೆ ಮುಂದುವರಿಸಬೇಕು ಅನ್ನೋದು ಅವರ ಕೊನೆ ಆಸೆ...
ನಿನ್ನೆ ಮಗನ ಹತ್ತಿರ ಮಾತಾಡಿದ್ದೇವೆ.....ನಿಮ್ಮೋಡನೆ ನಾವಿದ್ದೇವೆ...ನಿಮಕೆ ರಕ್ತದ ಕರೆ ಬಂದ್ರೆ..ನಂ ನಂಬರ್ ಕೋಡಿ ಅಂತಾ ನಾನೂ ಮತ್ತು ರಕ್ತದಾನಿ ಜೀವದಾನಿ ಗ್ರೂಪ್ ನ ಏರ್ಟೆಲ್ ಬದ್ರಿ ಹೇಲಿ ಸಂತೈಸಿ ಬಂದಿದ್ದೇವೆ...

ಮಹಾನ್ ರಕ್ತದಾನಿ ಮತ್ತು ನೇತ್ರದಾನಿ ನಿಶ್ಟಾವಂತ,ಸಮಾಜಕ್ಕೆ ಅಪರೂಪದ ಕೊಡುಗೆ ಕೊಟ್ಟ ಪೊಲೀಸ್ ಅದಿಕಾರಿಗೆ ಸಮಾಜ ಸೇವಕನಿಗೆ ನಿಮದೂ ಒಂದು ಸೆಲ್ಯೂಟ್ ಇರಲಿ


Yashvanth Hali Bandi

ಹಳಿತಪ್ಪಿದ ಬಂಡಿ..

ತುಂಬಾ ನೋವಾಗ್ತಿದೆ ಮನಸ್ಸಿಗೆ ನಿನ್ನೆ ಅವರ ಪಾರ್ಥೀವ ಶರೀರವನ್ನು ಅಂತಿಮವಾಗಿ ಕಂಡದ್ದು ಬನಶಂಕರಿ ಚಿತಾಗಾರದಲ್ಲಿ..ಸಂಜೆ ೬ ಗಂಟೆಯಲ್ಲಿ ಚಿತಾಗಾರದ ಮುಂದೆ ...ಕಲಾವಿದರ ದಂಡೇ ತುಂಬಿತ್ತು....

ಯಶವಂತ ಹಳಿಬಂಡಿಯವರನ್ನು ಕಳೆದುಕೊಂಡ ಇಂದು ಕಲಾ ದೇವಿ ತಬ್ಬಲಿಯಾಗಿದ್ದಾಳೆ...
.ಶ್ರಿಯುತರು..ಮಡದಿ ಮತ್ತು ಇಬ್ಬರು ಗಂಡುಮಕ್ಕಳನ್ನು ಅಗಲಿದ್ದಾರೆ...ಬಂದ್ಡಿಯವರ ಆತ್ಮಕ್ಕೆ ಶಾಂತಿ ಸಿಗಲಿ...ಆವರ ಕುಟುಂಬಕ್ಕೆ ನೋವ ಮರೆಯುವ ಶಕ್ತಿ ನೀಡಲೆಂದು
ಹೊಸಬೆಳಕು ಟ್ರಸ್ಟ್ ನ ಸಕಲರ ಪರವಾಗಿ ಭಗವಂತನಲ್ಲಿ ಪ್ರಾರ್ಥಿಸೋಣ....

ಪಾತರಗಿತ್ತಿ ಪಕ್ಕ ಖ್ಯಾತಿ ಗಾಯಕ ಯಶವಂತ ಹಳಿಬಂಡಿ ವಿಧಿವಶ

ಬೆಂಗಳೂರು, ಜ.22: 'ವರಕವಿ ಬೇಂದ್ರೆಯವರ 'ಪಾತರಗಿತ್ತಿ ಪಕ್ಕ ನೋಡಿದ್ದೇನ ಅಕ್ಕ..' ಹಾಡಿನ ಮೂಲಕ ಖ್ಯಾತಿ ಪಡೆದಿದ್ದ ಸುಗುಮ ಸಂಗೀತ ಕ್ಷೇತ್ರದ ಗಾಯಕ ಯಶವಂತ ಹಳಿಬಂಡಿ ಅವರು ಮಂಗಳವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಯಶವಂತ ಹಳಿಬಂಡಿ ಅವರ ಪಾರ್ಥೀವ ಶರೀರವನ್ನು ಬ್ಯಾಂಕ್ ಕಾಲೋನಿಯಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿದೆ. ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗುತ್ತದೆ ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ. ಧಾರಾವಾಡದಲ್ಲಿ 1950, ಮೇ 25ರಂದು ಜನಿಸಿದ ಯಶವಂತ ಹಳಿಬಂಡಿ ಅವರು ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಭಾವಗೀತೆ, ಜಾನಪದ ಸೇರಿದಂತೆ ಸುಮಾರು 250ಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದಾರೆ. ಬಾರೊ ಸಾಧನ ಕೇರಿಗೆ... ಎಂದು ಕರೆಯುತ್ತಿದ್ದ ಕಂಠ ಇನ್ನಿಲ್ಲ. ವರಕವಿ ದ.ರಾ ಬೇಂದ್ರೆವರ ಎದುರೇ ಅವರ ಗೀತೆಯನ್ನು ಹಾಡಿ ಅವರ ಮೆಚ್ಚುಗೆ ಆಶೀರ್ವಾದ ಪಡೆದಿದ್ದು ಯಶವಂತ ಹಳಿಬಂಡಿ ಅವರ ಸಾಧನೆ.ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಮುಂತಾದವರ ಗಾಯನದಿಂದ ಪ್ರಭಾವಿತರಾಗಿ ಗಾಯನ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡ ಯಶವಂತ ಅವರು ಸುಮಾರು ನಾಲ್ಕು ದಶಕಗಳ ಕಾಲ ಸುಗಮ ಸಂಗೀತ ಕ್ಷೇತ್ರದಲ್ಲಿ ತಮ್ಮ ನೆಲೆ ಕಂಡುಕೊಂಡರು.
ವರಕವಿ ದ.ರಾ ಬೇಂದ್ರೆ ಮೆಚ್ಚಿದ ಗಾಯಕ  : ವರಕವಿ ದ.ರಾ ಬೇಂದ್ರೆ ಅವರ ಮೆಚ್ಚುಗೆ ಗಳಿಸಿದ ಯಶವಂತ ಅವರ ಕಂಠ ಸಿರಿಯಲ್ಲಿ ಹೊರಹೊಮ್ಮಿರುವ ಪಾತರಗಿತ್ತಿ ಪಕ್ಕ ಹಾಡು

ಬೇಂದ್ರೆ ಮೆಚ್ಚುಗೆ ಗಳಿಸಿದ ಆ ಕ್ಷಣ ಯಶವಂತರು ಎಲ್ಲೇ ಹಾಡಲು ಹೋದರೂ ವರಕವಿಯನ್ನು ಭೇಟಿ ಮಾಡಿದ ಸಂದರ್ಭ ನೆನೆಯದೇ ಇರುತ್ತಿರಲಿಲ್ಲ. ಆಗಿನ್ನೂ ಧಾರವಾಡದ ಆಕಾಶವಾಣಿ ಅನುಮೋದಿತ ಗಾಯಕರಾಗಿ ನೇಮಕಗೊಂಡಿದ್ದರು. ಬೇಂದ್ರೆ ಅವರು ತಾವರೆಗೇರಿ ಆಸ್ಪತ್ರೆಯಲ್ಲಿದ್ದಾಗ ಆಕಾಶವಾಣಿಯಲ್ಲಿ 'ಮೂಡಲ ಮನೆಯ....' ಹಾಡು ಕೇಳಿ ಯಶವಂತರನ್ನು ಕರೆಸಿಕೊಂಡರು. ಅಳುಕಿನಿಂದಲೇ ಅವರ ಬಳಿ ಹೋಗಿ ನಿಂತ ಯಶವಂತರನ್ನು ನೋಡಿ ಬೇಂದ್ರೆ ಮಾಸ್ತರರು 'ಏನಹಾಡಿದ್ಯೋ ಮುಂಜಾನಿ ಹುಚ್ಚು ಹಿಡಿಸಿದಿ ನನಗ...'ಎಂದಾಗ ಹುಡುಗ ಹಳಿಬಂಡಿಗೆ ಮಾತೇ ಹೊರಡದಾಯಿತಂತೆ. ನಾಡಿನ ಪ್ರಸಿದ್ಧ ಕವಿಯೊಬ್ಬರಿಂದ ಪ್ರಶಂಸೆ, ಯಾವ ಪ್ರಶಸ್ತಿಯೂ ಸರಿಗಟ್ಟಲಾಗದ್ದು ಎಂದು ಯಶವಂತರು ಸದಾಕಾಲ ಸ್ಮರಿಸುತ್ತಿದ್ದರು.

ಧಾರವಾಡ ಸೊಗಡಿನ ಹೆಮ್ಮೆಯ ಪುತ್ರ ಯಶವಂತ ಹಳಿಬಂಡಿ  : ಅವರು 1950ರ ಮೇ 25ರಂದು ಧಾರವಾಡದಲ್ಲಿ ಜನಿಸಿದರು. ತಂದೆ ಹನುಮಂತ ಹಳಿಬಂಡಿ ಹಾಗೂ ತಾಯಿ ಬಸವೇಶ್ವರಿ. ಚಿಕ್ಕಂದಿನಲ್ಲೇ ಧಾರವಾಡದ ಪರಿಸರದಲ್ಲಿ ಹಾಸುಹೊಕ್ಕಾಗಿದ್ದ ಹಿಂದೂಸ್ಥಾನೀ ಸಂಗೀತಕ್ಕೆ ಯಶವಂತರು ಮಾರುಹೋದರು. ಲಕ್ಷ್ಮಣರಾವ್ ದೇವಾಂಗರಲ್ಲಿ ಮೊದಲಿಗೆ ಶಿಷ್ಯವೃತ್ತಿಯನ್ನು ಆರಂಭಿಸಿದರು. ಕೆಲವು ವರ್ಷಗಳ ನಂತರ ಹೆಚ್ಚಿನ ಪರಿಣಿತಿಗಾಗಿ ನಾರಾಯಣ ರಾವ್ ಮಜುಂದಾರ್ ಅವರಲ್ಲಿ ಶಿಕ್ಷಣ ಮುಂದುವರಿಸಿದರು. ಹೀಗೆ ಬಹಳಷ್ಟು ವರ್ಷ ಹಿಂದೂಸ್ತಾನಿ ಗಾಯನದ ತಾಲೀಮು ನಡೆಸಿದರು. ಬಾಳಪ್ಪ ಹುಕ್ಕೇರಿ, ಅನುರಾಧ ಧಾರೇಶ್ವರ್ ಗಾಯನದಿಂದ ಪ್ರಭಾವಿತರಾದವರು ಮುಂದೆ ಸುಗಮ ಸಂಗೀತ ಕ್ಷೇತ್ರವನ್ನು ಆಯ್ದುಕೊಂಡರು.

ಉದ್ಯೋಗದ ಜತೆಗೆ ಜತೆಗೆ ಹಾಡುಗಾರಿಕೆ  : ಕರ್ನಾಟಕ ವಿದ್ಯುತ್ ನಿಗಮದಲ್ಲಿ ಕೆಲಸಕ್ಕೆ ಸೇರಿ ಬೆಂಗಳೂರಿಗೆ ಬಂದ ಮೇಲೂ ಯಶವಂತ್ ಹಾಡುಗಾರಿಕೆ ಮುಂದುವರೆಸಿದರು.ಧಾರವಾಡದ ಆಕಾಶವಾಣಿಯ ಮಕ್ಕಳ ಕಾರ್ಯಕ್ರಮ 'ಗಿಳಿವಿಂಡು' ವಿನಲ್ಲಿ ಹಾಡಿ ಸೈ ಎನ್ನಿಸಿಕೊಂಡಿದ್ದ ಯಶವಂತ್ ಅವರು ಮುಂದೆ ದೂರದರ್ಶನದ ಮೂಲಕ ಮನೆ ಮಾತಾದರು. ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಸುಗಮ ಸಂಗಿತ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಹಸ್ರಾರು ಕಾರ್ಯಕ್ರಮಗಳನ್ನು ನಾಡಿನಾದ್ಯಂತ ನೀಡಿರುವ ಹಳಿಬಂಡಿ ತಮ್ಮದೇ ಆದ ತಂಡ ಕಟ್ಟಿ, ನಾಡಿನ ಉದ್ದಗಲಗಳಲ್ಲಿ ಸಂಚರಿಸಿ ಸುಪ್ರಸಿದ್ಧ ಕವಿಗಳ ಕವಿತಾಮೃತವನ್ನು ಸಂಗೀತಪ್ರಿಯರಿಗೆ ಉಣಬಡಿಸುತ್ತಾ ಸಾಗಿದ್ದಾರೆ.

ವೈವಿಧ್ಯಮಯ ಪ್ರತಿಭಾವಂತ ವ್ಯಕ್ತಿ ಯಶವಂತ ಯಶವಂತ ಹಳಿಬಂಡಿ :  ಅವರು ಗಾಯಕರಷ್ಟೇ ಅಲ್ಲ ಚಿತ್ರಕಲೆಯನ್ನು ಅಭ್ಯಸಿಸಿದ್ದರು. ಉತ್ತಮ ಸಂಗೀತ ಸಂಯೋಜಕರು, ಸಂಗೀತ ನಿರ್ದೇಶಕ, ಮರದ ಹಲಗೆಗಳಲ್ಲಿ ಹಾಗೂ ದಪ್ಪ ಕಾಗದದಲ್ಲಿ ಮನೆ, ಮಹಲುಗಳ ವಿನ್ಯಾಸ ಮಾಡುವುದರಲ್ಲಿ ಹಳಿಬಂಡಿ ಸಿದ್ಧ ಹಸ್ತರಾಗಿ ವಾಸ್ತುಶಿಲ್ಪಶಾಸ್ತ್ರದಲ್ಲೂ ಆಸಕ್ತಿ ವಹಿಸಿದ್ದರು. ಕಟ್ಟಡಗಳ ಮಾದರಿ ವಿನ್ಯಾಸ (ಮಿನಿಯೇಚರ್ ಮಾಡಲಿಂಗ್) ರಚನೆ ಮತ್ತೊಂದು ಪ್ರಮುಖ ಹವ್ಯಾಸ. ಕರ್ನಾಟಕ ಪತ್ರಕರ್ತರ ಸಹಕಾರಿ ಸಂಘದ ಸುವರ್ಣಭವನ ಇವರ ಮಿನಿಯೇಚರ ಮೇಲೆ ರಚಿಸಿದ ಕಟ್ಟಡ. ಓದಿದ್ದು ಪಿ.ಯು. ವರೆಗೆ, ಡ್ರಾಯಿಂಗ್ ಟೀಚರ್ಸ್ ಕೋರ್ಸ್ ಮುಗಿಸಿ ಟ್ರೀಸರ್ ಆಗಿ ಸೇರಿದ್ದು ಧಾರವಾಡದ ಕರ್ನಾಟಕ ಪವರ್ ಕಾರ್ಪೋರೇಶನ್ ನಲ್ಲಿ ನಂತರ ಬೆಂಗಳೂರಿನಲಿ ಅದೇ ವೃತ್ತಿ ಮುಂದುವರೆಸಿದ್ದರು.

ಹಲವು ಮೆಲಕು ಹಾಕುವ ಗೀತೆಗಳನ್ನು ಹಾಡಿದ್ದಾರೆ  : ಭಾವಗೀತೆಗಳ ಜೊತೆ ಜೊತೆಗೆ ಭಕ್ತಿಗೀತೆ, ಜಾನಪದಗೀತೆ, ಶರಣರ ಪದ, ವಚನ , ತತ್ವಪದ ಹೀಗೆ ಹಲವು ಪ್ರಕಾರದಲ್ಲಿ ಹಳಿಬಂಡಿ ತಮ್ಮ ದನಿಯಿಂದ ಪ್ರಸಿದ್ಧರಾಗಿದ್ದಾರೆ. ಕರ್ನಾಟಕ ಸರ್ಕಾರ ಆಯೋಜಿಸುವ ಹಂಪಿ ಉತ್ಸವ, ಕದಂಬೊತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವ, ಕರಾವಳಿ ಉತ್ಸವದಂತಹ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಂಗೀತ ನಿರ್ದೇಶಕರಾಗಿ ಹಾಗು ಗಾಯಕರಾಗಿ ಮನಗೆದ್ದಿದ್ದಾರೆ. ಯಶವಂತ ಹಳಿಬಂಡಿ ಅವರು ಹಾಡಿರುವ ಬೇಂದ್ರೆಯವರ ಪಾತರಗಿತ್ತಿಪಕ್ಕ ನೋಡಿದ್ದೇನ ಅಕ್ಕ', 'ಹೋಗು ಮನಸೆ ಹೋಗು ನಲ್ಲೆ ಇರುವಲ್ಲಿ ಹೋಗು..., ' 'ಕುಣಿಯೋಣು ಬಾರಾ ಕುಣಿಯೋಣು ಬಾ...,' 'ನಾ ಸಂತಿಗಿ ಹೋಗಿನ್ನಿ ಆಕೆ ತಂದಿದ್ದಳೂ ಬೆಣ್ಣಿ...' 'ಎಲ್ಲೋ ಜೋಗಪ್ಪ ನಿನ್ನ ಅರಮಾನೆ...' 'ಕುಂಬಾರಕ್ಕಿ ಈಕಿ ಕುಂಬಾರಕ್ಕಿ,..' 'ಬಾರೊ ಸಾಧನ ಕೇರಿಗೆ ಗೀತೆ..' ಮುಂತಾದ ಗೀತೆಗಳಿಗೆ ಯಶವಂತ ದನಿಯಾಗಿದ್ದರು.

ಸುಗಮ ಸಂಗೀತ ಸಾರ್ವಭೌಮ ಯಶವಂತ : ರಾಜ್ಯ ಸರ್ಕಾರ ಕರ್ನಾಟಕ ಕಲಾಶ್ರೀ' ಪ್ರಶಸ್ತಿ ನೀಡಿ ಗೌರವಿಸಿದೆ. ಭಾವಗೀತೆ, ಭಕ್ತಿಗೀತೆ, ಜಾನಪದ, ವಚನ ಮುಂತಾದ 250ಕ್ಕೂ ಹೆಚ್ಚು ಧ್ವನಿ ಸುರುಳಿಗಳ ಹಾಡುಗಾರರು. ಹಲವಾರು ಚಲನಚಿತ್ರಗಳಿಗೂ ಗಾಯನ, ಕರ್ನಾಟಕ ಸರಕಾರದ ಹಂಪಿ ಉತ್ಸವ, ಕದಂಬ ಉತ್ಸವ, ಕಿತ್ತೂರು ಉತ್ಸವ, ಕರಾವಳಿ ಉತ್ಸವ, ಚಾಲುಕ್ಯ ಉತ್ಸವ, ಹೊಯ್ಸಳ ಉತ್ಸವಗಳಲ್ಲಿ ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಭಾಗಿ, ರಾಜ್ಯ ಸಂಗೀತ ನೃತ್ಯ ಅಕಾಡೆಮಿಯಿಂದ ಕರ್ನಾಟಕ ಕಲಾಶ್ರೀ, ರಾಜ್ಯಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು. ಸುಗಮ ಸಂಗೀತ ಸಾರ್ವಭೌಮ, ಬೆಂಗಳೂರು ರತ್ನ ಮುಂತಾದ ಬಿರುದುಗಳು.

ಕೃಪೆ oneindia.in.ಧನ್ಯವಾದ..