Thursday, January 23, 2014

Blood King Krishna Singh....

ಬ್ಲಡ್ ಕಿಂಗ್..ರಕ್ತದಾನಿ ಸಿಂಗ್ ಇನ್ನಿಲ್ಲ

ಸಾವಿರಾರು ಜನರನ್ನು ರಕ್ತ ನೀಡಿ ಪ್ರಾಣ ಉಳಿಸಿದ ಸಮಾಜ ಸೇವಕ ಹಾಗೂ ನಮ್ಮೆಲ್ಲರ ಸೇವೆಯ ಸ್ಪೂರ್ತಿ  ರಕ್ತದಾನಿ ಸಿಂಗ್ ಎಂದೇ ಖ್ಯಾತರಾಗಿದ್ದ ಪೊಲೀಸ್ ಕೃಷ್ಣಸಿಂಗ್ ಸ್ವಾಶಕೋಶದ ತೊಂದರೆಯಿಂದ ನಿನ್ನೆ ಬೆಳಿಗ್ಗೆ 8.30 ರಲ್ಲಿ ಕಿಮ್ಸ್ ಆಸ್ಪತ್ರೆ ಬೆಂಗಳೂರು ಇಲ್ಲಿ ಕೊನೆಯುಸಿರೆಳೆದರು.
4995 ಜನಕ್ಕೆ ರಕ್ತವನ್ನು ನೀಡಲು ಸಹಕರಿಸಿದ್ದ ಸಿಂಗ್ ,ಟ್ರಾಪಿಕ್ ಸಬ್ ಇನ್ಸ್ಪೆಕ್ಟರ್ ಆಗಿ ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿ ಕಳೆದ ಜುಲೈನಲ್ಲಿ ನಿವ್ರತ್ತಿ ಹೊಂದಿದ್ದರು.
ಎಂದೂ ಯಾವುದೇ ವಾಹನ ಸವಾರರಿಗೂ ಒಂದು ರೂ ಕೂಡ ಪಡೇಯದೆ ಅವರಿಗೆ ಫೈನ್ ಹಾಕುವುದರ ಬದಲಿಗೆ ಅವರ ಬ್ಲಡ್ ಗ್ರೂಪ್ ಪಡೆಯುವ ಮೂಲಕ ೫ ಸಾವಿರ ಜನರಿಗೆ ರಕ್ತ ಒದಗಿಸುವುದು ತನ್ನ ದೊಡ್ಡ ಆಸೆ ಎಂಡು ಹಲವಾರು ಬಾರಿ ಹೇಳಿದ್ದರು,ಆದರೆ ಇನ್ನು 5 ಜನರಿಗೆ ರಕ್ತ ನೀಡುವ ಮುನ್ನವೇ ಅವರು ಇಹಲೋಕವನ್ನು ತ್ಯಜಿಸಿ ತನ್ನ ಕೊನೆಯ ಆಸೆಯನ್ನು ಈಡೇರಿಸಲು ಸಾದ್ಯವಾಗಿಲ್ಲ.
    ಇತ್ತೀಚೆಗಷ್ಟೆ ಜಿಗಣಿಯ ಹಾರಗದ್ದೆಯಲ್ಲಿ ನಡೆದ ೭ನೇ ಕನ್ನಡ ಸಾಹಿತ್ಯಸಮ್ಮೇಳನದಲ್ಲಿ ವಿಶೇಷ ಸನ್ಮಾನಿತರಲ್ಲಿ ನಾನೂ ಮತ್ತು ಕೃಷ್ಣಸಿಂಗ್ ಜೊತೆಯಲ್ಲಿ ಸನ್ಮಾನ ಮಡಿಸಿಕೊಂಡಿದ್ದು ನನ್ನ ಪುಣ್ಯ...ಅಂದು ಸಹಾ ನೇತ್ರದಾನದ ಮಾಹಿತಿ ಇರುವ ಕರಪತ್ರವನ್ನು ಬಂದಿದ್ದ ಎಲ್ಲರಿಗೂ ಇಬ್ಬರೂ ಸೇರಿ ವಿತರಿಸಿದೆವು..
ಆಗ ಹೇಳಿದ ಮಾತು...ನನ್ನನ್ನು ಆಣ್ಣಾ ಎಂದು ಕರೆಯುತ್ತಿದ್ದರು...ರಾಮಕೃಷ್ಣಣ್ಣಾ...ನನಗೆ ವಯಸಾಗ್ಥಿದೆ....ನೀವು ಯುವಕ್ರು ನಿಮಗೆ ಹೆಚ್ಚಿನ ಜವಬ್ದಾರಿಯಿದೆ....ನಾನೇನಾದರೂ....ಸತ್ತೋದ್ರೆ ನನ್ನ ಕಣ್ಣುಗಳನ್ನು ದಮಮಾಡಿ ದಾನ ಮಾಡಿಸಿ ಎಂದು.....
22.1.2014 ಸಮಯ  8.45 ಅವರ ಮಗಳು ಶ್ರೀಮತಿ.ಶ್ರೀದೇವಿ..ಕರೆಮಾಡಿ ಸಾರ ಅಪ್ಪಾಜಿ ತೀರ್ಕೊಂದ್ರು ಅಂದ್ರು...ದೈರ್ಯತಗೊಳಿಮಾ...ಅಪ್ಪಾಜಿಯವರ ಕೊನೆ ಆಸೆ ನೆತ್ರದಾನ ಮಾಡೊದು ಎಂದು ನಾನ್ನೊಡನೆ ಹೇಳಿದ್ರು...ನೋವು ಅರ್ಥಾ ಆಗ್ತಿದೆ...ದಯಮ್ಮಡಿ ನೇತ್ರದಾನ ಮಾದಿಸಿ ಪ್ಲೀಸ್ ಅಂದೆ...
ಅಂತೆಯೇ ಕ್ಕಿಮ್ಸ್ ಆಸ್ಪತ್ರೆಗೆ ನೇತ್ರದಾನ ಮಾಡಿದ್ದಾರೆ...

ಶ್ರೀ.ಕೃಷ್ಣ ಸಿಂಗ್ ಸತ್ತಿಲ್ಲ ತನ್ನೆರಡು ಕಣ್ಣುಗಳನ್ನು ದಾನ ಮಾಡಿ..ಇಬ್ಬರಲ್ಲಿ ಬದುಕಿದ್ದಾರೆ....ಆ ...ಇಬ್ಬರು...ಇನ್ನೈವತ್ತು ವರುಷ ಬದುಕಿದರೆ...ಅಸ್ಟು ದಿನಗಳೂ...ಸಿಂಗ್ ಬದುಕಿರ್ತಾರೆ

ಅವರ ಮಗ 9.30 ರಲ್ಲಿ ಕರೆಮಾಡಿ ಸಾರ ದೇಹದಾನ ಸಹಾ ಮಾಡಬಹುದಾ ಎಂದರು....ಇಲ್ಲಪ್ಪ ಅದಕ್ಕೆ ಅವರು ಬದುಕಿರುವಾಗಲೆ ಅರ್ಜಿತುಂಬಿಸಬೇಕಾಗಿತ್ತು ಇಗ ಆಗುವುದಿಲ್ಲ ಎಂದೆ...

ದೇಹ ದಾನ ಮಾಡುವ ಯೋಚನೆ ಮಾಡುವ ಹಂತಕ್ಕೆ ಸಿಂಗ್ ಕುಟುಂಬದವರು ಬಂದಿದ್ದಾರೆ ಎಂದರೆ...ಅವರದು ಎಂತಹಾ ಸೇವಾಮನೋಭಾವ ಇರುವ ಕುಟುಂಬ ಅಲ್ಲವೆ....

ಅವರು ಮಡದಿ ಮಗ,ಇಬ್ಬರು ಹೆಣ್ನುಮಕ್ಕಳು ಮತ್ತು ಸವಿರಾರು ರಕ್ತದಾನಿಗಳನ್ನು ಅಗಲಿದ್ದಾರೆ...
ಅವರ ಆತ್ಮಕ್ಕೆ ಶಾಂತಿ ಸಿಗಲಿ...ಅವರ ಕುಟುಂಬದವರಿಗೆ ಬಗವಂತ ಆಯುರಾರೊಗ್ಯ ಐಶ್ವರ್ಯ ನೀದಲಿ ಎಂದು ಸಮಸ್ತ ಹೊಸಬೆಳಕು ಟ್ರಸ್ತ್ ಪರವಾಗಿ ಪ್ರಾರ್ಥನೆ..

ರಿಟೈರ್ ಆದರೂ 60.000 ರೂ ಸಾಲ ನೆಂಟರಿಗೆ ನೀಡಬೇಕು..ನನ್ನಮರಣಾ ನಂತರವೂ..ನನ್ನ ಮಗ ನನ್ನ ಸೇವೆ ಮುಂದುವರಿಸಬೇಕು ಅನ್ನೋದು ಅವರ ಕೊನೆ ಆಸೆ...
ನಿನ್ನೆ ಮಗನ ಹತ್ತಿರ ಮಾತಾಡಿದ್ದೇವೆ.....ನಿಮ್ಮೋಡನೆ ನಾವಿದ್ದೇವೆ...ನಿಮಕೆ ರಕ್ತದ ಕರೆ ಬಂದ್ರೆ..ನಂ ನಂಬರ್ ಕೋಡಿ ಅಂತಾ ನಾನೂ ಮತ್ತು ರಕ್ತದಾನಿ ಜೀವದಾನಿ ಗ್ರೂಪ್ ನ ಏರ್ಟೆಲ್ ಬದ್ರಿ ಹೇಲಿ ಸಂತೈಸಿ ಬಂದಿದ್ದೇವೆ...

ಮಹಾನ್ ರಕ್ತದಾನಿ ಮತ್ತು ನೇತ್ರದಾನಿ ನಿಶ್ಟಾವಂತ,ಸಮಾಜಕ್ಕೆ ಅಪರೂಪದ ಕೊಡುಗೆ ಕೊಟ್ಟ ಪೊಲೀಸ್ ಅದಿಕಾರಿಗೆ ಸಮಾಜ ಸೇವಕನಿಗೆ ನಿಮದೂ ಒಂದು ಸೆಲ್ಯೂಟ್ ಇರಲಿ


No comments:

Post a Comment