Saturday, January 18, 2020

ಪಲ್ಸ್ ಪೋಲಿಯೋ ಲಸಿಕೆ


2020 ಪಲ್ಸ್ ಪೋಲಿಯೋ..

ಪೋಷಕರೆ ನೆನಪಿಡಿ ಇದೆ ಜನವರಿ 19 ರಂದು ದೇಶಾದ್ಯಾಂತ ಪಲ್ಸ್ ಪೋಲಿಯೋ ಕಾರ್ಯಕ್ರಮ . ತಪ್ಪದೆ  5 ವರ್ಷದೊಳಗಿನ ನಿಮ್ಮ ಮಕ್ಕಳನ್ನು  ಕರೆತಂದು ಪೋಲಿಯೋ ಹನಿಗಳನ್ನು ಹಾಕಿಸುವುದರೊಂದಿಗೆ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಮತ್ತು  ಪೋಲಿಯೋ ಮುಕ್ತ ರಾಷ್ಟ್ರ ನಿರ್ಮಿಸಲು ಸಹಕರಿಸಿ.

ಸುಸಂದರ್ಭದಲ್ಲಿ ಪೋಲಿಯೋ ಬಗ್ಗೆ ನಿಮಗೊಂದಿಷ್ಟು  ಮಾಹಿತಿ..

ಪೊಲೀಯೊಮ್ಯೇಲಿಟೆಸ್, ಇದನ್ನು ಪೊಲೀಯೊ ಕರೆಯುತ್ತಾರೆ. ಇದು ಚಿಕ್ಕ ಮಕ್ಕಳಲ್ಲಿ ಕಂಡು ಬರುವ ರೋಗ. ರೋಗವು ಸಾಂಕ್ರಾಮಿಕ ರೋಗ. ಒಬ್ಬರಿಂದ ಇನ್ನೋಬ್ಬರಿಗೆ ಹರಡುವ ರೋಗ.

1995-96
ರಲ್ಲಿ ಪ್ರಾರಂಭವಾದ ಪಲ್ಸ್ ಪೋಲಿಯೋ ಅಭಿಯಾನ ಅದ್ಭುತವಾಗಿ ಸಾಧನೆಯನ್ನು ಮಾಡಿದೆ. ಪೋಲಿಯೋ ರೋಗ ಒಂದು ದೊಡ್ಡ ಸವಾಲಾಗಿತ್ತು. 5 ವರ್ಷದ ಒಳಗಿನ ಮಕ್ಕಳನ್ನು ಭಾದಿಸುವ ಪೋಲಿಯೋ ವೈರಸ್ ಮುಖ್ಯವಾಗಿ ನರಮಂಡಲವನ್ನು ಭಾದಿಸುತ್ತದೆ.

ಜ್ವರ, ಗಂಟಲು ನೋವು, ತಲೆನೋವು, ವಾಂತಿ, ಬೆನ್ನುನೋವು, ಮಾಂಸ ಖಂಡಗಳ ನೋವು ಮುಂತಾದ ಸಣ್ಣ ಪ್ರಮಾಣದ ತೊಂದರೆಯಿಂದ ತೊಡಗಿ ನರಮಂಡಲವನ್ನೂ ಒಳಗೊಂಡರೆ ನರಗಳ ಬಲಹೀನತೆ ಉಂಟಾಗಬಹುದು. ಉಸಿರಾಟದ ತೊಂದರೆ ಕಾಣಿಸಿಕೊಳ್ಳಬಹುದು. ವ್ಯಕ್ತಿಯಿಂದ ವ್ಯಕ್ತಿಗೆ ಮಲದ ಮೂಲಕ ಹರಡುವ ವೈರಸ್, ರೋಗ ಪ್ರತಿರೋಧ ಇಲ್ಲದವರನ್ನು ಭಾದಿಸುತ್ತದೆ.

ನಡೆಯಲು ಶಕ್ತಿ ಇಲ್ಲದ ಮಗುವನ್ನು ನೋಡುವುದು ಯಾವುದೇ ಹೆತ್ತವರಿಗೆ ದೊಡ್ಡ ಆಘಾತ. ಆಘಾತವನ್ನು ಇಲ್ಲದಂತೆ ಮಾಡಿದ್ದು ಪಲ್ಸ್ ಪೋಲಿಯೋ ಹನಿ. 27-03-2014 ಎಂಬ ದಿನವನ್ನು ಭಾರತದ ಆರೋಗ್ಯ ಇಲಾಖೆ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ದಿನ ಭಾರತ ವಿಶ್ವ ಆರೋಗ್ಯ ಸಂಸ್ಥೆಯಿಂದಪೋಲಿಯೋ ಮುಕ್ತ ರಾಷ್ಟ್ರಎಂಬ ಪ್ರಮಾಣ ಪತ್ರವನ್ನು ಪಡೆದಂತಹ ಸುದಿನ. ವಿಶ್ವದಲ್ಲಿ ಪಾಕಿಸ್ತಾನ, ಅಫಘಾನಿಸ್ತಾನ ಮತ್ತು ನೈಜೀರಿಯಾ ಮಾತ್ರ ಪೋಲಿಯೋ ಪೀಡಿತ ರಾಷ್ಟ್ರಗಳ ಪಟ್ಟಿಯಲ್ಲಿತ್ತು. ಆದರೆ ಈಗ ಪ್ರಸ್ತುತ 8 ರಾಷ್ಟ್ರಗಳಲ್ಲಿ ರೋಗ ಇದೆ.

ಪೋಲಿಯೋ ಮುಕ್ತ ರಾಷ್ಟ್ರಎಂಬ ಪ್ರಮಾಣ ಪತ್ರ ಪಡೆದ ಮೇಲೆ ಪಲ್ಸ್ ಪೋಲಿಯೋ ಯಾಕೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡಬಹುದು. ಇತ್ತೀಚೆಗೆ ಪೋಲಿಯೋ ಹಲವಾರು ದೇಶಗಳಲ್ಲಿ ಮತ್ತೆ ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಹಿಂದೆ ಪೋಲಿಯೋ ರಹಿತ ರಾಷ್ಟ್ರಗಳಾಗಿದ್ದ ಸೊಮಾಲಿಯಾ, ಕೆನ್ಯಾ, ಕ್ಯಾಮರೂನ್, ಇಥಿಯೋಪಿಯಾ, ಸಿರಿಯಾ, ಇಸ್ರೇಲ್, ಇರಾಕ್ ಮುಂತಾದ ದೇಶಗಳಲ್ಲಿ ಪೋಲಿಯೋ ವೈರಸ್ ಪ್ರಕರಣಗಳು 2014 ರಲ್ಲಿ ಪುನಃ ಕಂಡು ಬಂದಿವೆ. ಇದು ನಮ್ಮ ದೇಶಕ್ಕೆ ಎಚ್ಚರಿಕೆಯ ಘಂಟೆ. ನಾವು ಎಚ್ಚರ ತಪ್ಪಿದಲ್ಲಿ ಪೋಲಿಯೋ ಸಾಂಕ್ರಾಮಿಕವಾಗಿ ಮತ್ತೊಮ್ಮೆ ವ್ಯಾಪಿಸುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯದಲ್ಲಿ ಕೊನೆಯ ಪೋಲಿಯೋ ಪ್ರಕರಣ 03-11-2007 ರಂದು ರಾಜ್ಯಕ್ಕೆ ವಲಸೆ ಬಂದಿರುವ ಗುಂಪಿನಲ್ಲಿ ಪತ್ತೆಯಾಗಿತ್ತು. ಅನಂತರ ಇಲ್ಲಿಯವರೆಗೆ ಯಾವುದೇ ಪೋಲಿಯೋ ಪ್ರಕರಣ ಪತ್ತೆಯಾಗಿರುವುದಿಲ್ಲ. ನಿಟ್ಟಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು, ಸ್ವಯಂಸೇವಕರು, ಖಾಸಗಿ ವಲಯದ ಸಂಸ್ಥೆಗಳು ಪ್ರಶಂಸನೀಯ.

ವರ್ಷ ಜನವರಿ 19  ರಂದು ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪೋಲಿಯೋವನ್ನು ಕೊನೆಗಾಣಿಸಿ, ಪೋಲಿಯೋ ರಹಿತ ವಿಶ್ವದ ಕನಸನ್ನು ನನಸಾಗಿಸುವುದು ಇದರ ಉದ್ದೇಶ. 5 ವರ್ಷದ ವರೆಗಿನ ಎಲ್ಲಾ ಮಕ್ಕಳು ಅಂದು ತಪ್ಪದೇ ಪಲ್ಸ್ ಪೋಲಿಯೋ ಲಸಿಕೆ ಪಡೆಯಬೇಕು.

ಮೊದಲು ಪೋಲಿಯೋ ಚುಚ್ಚುಮದ್ದು ಅಥವಾ ಪೋಲಿಯೋ ಹನಿ ತೆಗೆದುಕೊಂಡವರು ಕೂಡಾ ದಿನ ಪೋಲಿಯೋ ಹನಿ ತೆಗೆದುಕೊಳ್ಳಬೇಕು. ಯಾವ ಪೋಷಕರು ಜನವರಿ 19 ರಂದು ಪಲ್ಸ್ ಪೋಲಿಯೋ ಹನಿ ತಮ್ಮ ಮಕ್ಕಳಿಗೆ ದೊರೆಯುವಂತೆ ಮಾಡುವುದಿಲ್ಲವೋ ಅವರು ವಿಶ್ವದ ಕನಸನ್ನು ಇಲ್ಲವಾಗಿಸುವವರು. ಬನ್ನಿ ಪೋಲಿಯೋ ಮುಕ್ತ ರಾಷ್ಟ್ರ, ಸದೃಢ ವಿಶ್ವಕ್ಕೆ ನಮ್ಮ ಕೊಡುಗೆಯನ್ನು ನೀಡೋಣ. ಜನವರಿ 19 ರಂದು ನಿಮ್ಮ ಸಂಪರ್ಕದಲ್ಲಿರುವ 0-5 ವರ್ಷದ ವರೆಗಿನ ಎಲ್ಲ ಮಕ್ಕಳ ನಡಿಗೆ ಪೋಲಿಯೋ ಬೂತಿನೆಡೆಗೆ ಆಗಿರಲಿ
ಬನ್ನಿ ಪೋಲಿಯೋ ಮುಕ್ತ ದೇಶಕ್ಕಾಗಿ ಶ್ರಮಿಸೋಣ 
ಹೊಸಬೆಳಕು ಟ್ರಸ್ಟ್(ರಿ ) ಶ್ರೀ ಸಾಯಿವಿನೋದ್ ಚಾರಿಟಬಲ್   ಟ್ರಸ್ಟ್(ರಿ )  ಜಿಗಣಿ 

Hosabelaku Trust(R) & Sri Sai Vinod Charitable Trust(R) Jigani
Eye-Organ-Body-Blood Donation let be our Family TRADITION
if Eye/Organ donation time comes contact nearest Hospital or Medical College 
or Contact us 24/7 @ 9945028899 / 9342171646 we will co-ordinate
Thanks for Understanding ORGAN DONATIONS..

Regards

Jigani Ramakrishna Founder Trustee,#PublicHero #Hosabelaku_Trust 9945028899


Jigani Vinod Founder Trustee  9036800123 Sri Sai Vinod Charitabal Trust(R) - Jigani







No comments:

Post a Comment