ಆತ್ಮೀಯರೆ,
ಎಂ.ಎ.ಬಿ.ಎಲ್.ಶಾಲೆಯ ಸಂಸ್ಥಾಪಕರು ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಅಧ್ಯಕ್ಷರಾಗಿದ್ದ *ಶ್ರೀಮತಿ ಹೆಚ್.ಆರ್.ದೇವಕಿಗುರುದೇವರವರು* ಎರಡು ವರ್ಷಗಳ ಹಿಂದೆ ನಮ್ಮನ್ನು ಅಗಲಿರುತ್ತಾರೆ. ತಮ್ಮ ಜೀವಮಾನದಲ್ಲಿ 940 ಕಣ್ಣುಗಳನ್ನು ಅಭಿಷೇಕ್ ನೇತ್ರಧಾಮದ ಪರವಾಗಿ ಸಂಗ್ರಹಿಸಿ ಡಾ.ರಾಜ್ ಕುಮಾರ್ ನೇತ್ರ ಭಂಡಾರ ಬೆಂಗಳೂರುರವರಿಗೆ ಕಳುಹಿಸಿಕೊಟ್ಟಿರುತ್ತಾರೆ ಹಾಗೂ ತಮ್ಮ ಜೀವಮಾನದಲ್ಲಿ 20ಕ್ಕೂ ಹೆಚ್ಚು ಬಾರಿ ರಕ್ತದಾನಮಾಡಿ ಮಾದರಿಯಾಗಿರುತ್ತಾರೆ. ಇವರ ಎರಡನೇ ಪುಣ್ಯಸ್ಮರಣೆಯ ಅಂಗವಾಗಿ ಉಚಿತ ನೇತ್ರ ತಪಾಸಣೆ ಮತ್ತು ಉಚಿತ ಕನ್ನಡಕಗಳ ವಿತರಣೆ ಹಾಗೂ ನೇತ್ರದಾನಿಗಳಿಗೆ ಸನ್ಮಾನವನ್ನು ಅಭಿಷೇಕ್ ನೇತ್ರಧಾಮ ದೊಡ್ಡಬಳ್ಳಾಪುರ ರವರು ಪ್ರಾಯೋಜಿಸಿರುತ್ತಾರೆ.
ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಡಾ.ಕೆ.ಎಸ್.ಶ್ಯಾಮ್ ಪ್ರಸಾದ್ ಎಂ.ಡಿ, ಶ್ಯಾಮು ಹೆಲ್ತ್ ಕೇರ್ ಸೆಂಟರ್ ಮತ್ತು ಅದಮ್ಯ ಸರ್ಜಿಟೆಕ್ ರವರು ಪ್ರಾಯೋಜಿಸಿರುತ್ತಾರೆ.
ಉಚಿತ ದಂತ ತಪಾಸಣಾ ಶಿಬಿರವನ್ನು ವಿಜಯದಂತ ಚಿಕಿತ್ಸಾಲಯದ ಡಾ.ಅಂಬಿಕ ರವರು ಪ್ರಾಯೋಜಿಸಿರುತ್ತಾರೆ.ತಾವುಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಕೋರುತ್ತೇನೆ.
*ರಕ್ತದಾನ ಮಾಡಲು ವಿಶೇಷ ಮನವಿ*
18 ವರ್ಷದ ಮೇಲ್ಪಟ್ಟು 50 ವರ್ಷದ ಒಳಪಟ್ಟು 50ಕೆ.ಜಿ ದೇಹತೂಕವುಳ್ಳ ಎಲ್ಲಾ ವ್ಯಕ್ತಿಗಳು (ಸ್ತ್ರೀ ಪುರುಷರು) ದಯಮಾಡಿ ಬಂದು ತಪ್ಪದೆ ರಕ್ತದಾನ ಮಾಡಿ - ಜೀವದಾನಿಗಳಾಗಿ ಹಾಗೂ ನೇತ್ರದಾನ ನೋಂದಣಿ ಮಾಡಿಸಿ ತಾವು ನೇತ್ರದಾನಿಗಳಾಗಿ.
ಸ್ಥಳ : ಶ್ರೀಮಾರುತಿ ವ್ಯಾಯಾಮ ಶಾಲೆ, ಕುಚ್ಚಪ್ಪನ ಪೇಟೆ, ದೊಡ್ಡಬಳ್ಳಾಪುರ.
ದಿನಾಂಕ 19.01.2020 ನೇ ಭಾನುವಾರ
ಸಮಯ : ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ.
*ಎಂ.ಬಿ.ಗುರುದೇವ*
ಎಂ.ಎ.ಬಿ.ಎಲ್ ಮತ್ತು ಸ್ವಾಮಿ ವಿವೇಕಾನಂದ ಶಾಲೆ, ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್ ದೊಡ್ಡಬಳ್ಳಾಪುರ.

No comments:
Post a Comment