Tuesday, March 10, 2026

Eye Donation CPIM Leader #Siddanahalli_V_Shekar's Mother Smt Gowramma ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಗೌರಮ್ಮನವರ ನೇತ್ರದಾನ. 10.3.2026

CPIM ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಗೌರಮ್ಮನವರ ನೇತ್ರದಾನ. 1೦.3.26 CPIM ಮುಖಂಡ ಸಿದ್ದನಹಳ್ಳಿ ವಿ.ಶೇಖರ್ ಅವರ ತಾಯಿ ಶ್ರೀಮತಿ ಗೌರಮ್ಮನವರು ವಯೋಸಹಜವಾಗಿ ಇಂದು ಸಂಜೆ ನಿಧನರಾಗಿದ್ದು ಅವರ ಕಣ್ಣುಗಳನ್ನು ನಾರಾಯಣ ನೇತ್ರಾಲಯದ ಡಾಕ್ಟರ್ ರಾಜಕುಮಾರ್ ಐ ಬ್ಯಾಂಕಿಗೆ ದಾನ ಮಾಡಿದ್ದಾರೆ. ಮೃತರ ಹಿರಿಯಮಗ ಮಗ ಶೇಖರ್ ಭಾವುಕರಾಗಿ ಮಾತನಾಡಿ ನನ್ನಮ್ಮನ ಇಚ್ಛೆಯಂತೆ ನೇತ್ರದಾನ ಮಾಡಿದ್ದೇವೆ,ಈ ಕಾಯಕ ಇಡೀ ನಮ್ಮ ಕುಟುಂಬಕ್ಕೆ ಗೌರವತಂದಿದೆ. ನನ್ನಮ್ಮನಂತೆ ತಾವುಗಳೆಲ್ಲರೂ ಅಂಗಾಂಗದಾನಕ್ಕೆ ಮುಂದಾಗಬೇಕೆಂದರು. ಮತ್ತೊಬ್ಬ ಮಗ ಜಯಕುಮಾರ್ ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇವೆ, ಆ ಕಣ್ಣುಗಳು ನಾಳೆ ಯಾರದೋ ಕಣ್ಣುಕಾಣದ ಇಬ್ಬರು ಕಾರ್ನಿಯಾ ಅಂಧರ ಮನೆಯಲ್ಲಿ ಹೊಸಬೆಳಕಿನ ಹೊಸಜೀವನ ತರಲಿವೆ ಎಂದರು. ಮೃತರ ಸೊಸೆ ಮಾನಸ ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕು ನೀಡಬೇಕೆಂದು ಮನವಿ ಮಾಡುತ್ತಾ ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ ಅವರು ನೇತ್ರದಾನಕ್ಕೆ ಸ್ಫೂರ್ತಿ ಎಂದರು. ನೇತ್ರದಾನ ಮತ್ತು ದೇಹದಾನ ಕಾಯಕದಲ್ಲಿ ಜೊತೆಯಾದದ್ದು ಶಾಂತಿಪುರ ಮಾಜಿ ಗ್ರಾ.ಪಂ ಅಧ್ಯಕ್ಷರು ಎಸ್.ರಾಮಸ್ವಾಮಿ, ಎಸ್.ಗುರಪ್ಪ,ವಿ.ಶೇಖರ್, ಮಾನಸಶೇಖರ್, ವಿ.ಜಯಕುಮಾರ್, ಹೊಸಬೆಳಕು ಟ್ರಸ್ಟಿನ ಸಂಸ್ಥಾಪಕರಾದ ಡಾ//ರಾಮಕೃಷ್ಣ ,ನಾರಾಯಣ ನೇತ್ರಾಲಯದ ಶ್ರೀ ಅಶೋಕ್,ಕುಟುಂಬಸ್ಥರು ಹಾಜರಿದ್ದರು. . ನೇತ್ರದಾನ – ಅಂಗಾಂಗದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ. ನೇತ್ರದಾನ – ಅಂಗಾಂಗದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ. ಫೋಟೊ ಶೀರ್ಷಿಕೆ : 1. ಶ್ರೀಮತಿ. ಗೌರಮ್ಮ ಫೋಟೊ ಶೀರ್ಷಿಕೆ : 2. ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತರ ಮಗ ವಿ.ಶೇಖರ್, ಎಸ್.ರಾಮಸ್ವಾಮಿ, ಎಸ್.ಗುರಪ್ಪ,ಕೃಷ್ಣಪ್ಪ, ನಾರಾಯಣ ನೇತ್ರಾಲಯದ ಶ್ರೀ ಅಶೋಕ್,ಕುಟುಂಬಸ್ಥರು

No comments:

Post a Comment