Tuesday, June 16, 2026
Eye Donation of Shree Lion Venkatesh.R of Jigani to Narayana Netralaya Dr.Rajakumar Eye Bank ಪತ್ರಿಕಾ ಪ್ರಕಟಣೆಗಾಗಿ : ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನೇತ್ರದಾನ. @hosabelakutrust @jiganiramakrishna
Eye Donation of Shree Lion Venkatesh.R of Jigani to Narayana Netralaya Dr.Rajakumar Eye Bank
ಪತ್ರಿಕಾ ಪ್ರಕಟಣೆಗಾಗಿ : ಆನೇಕಲ್ ತಾಲ್ಲೂಕಿನ ಜಿಗಣಿಯಲ್ಲಿ ನೇತ್ರದಾನ.
16.6.2026 : ಜಿಗಣಿಯ ಲಯನ್ ವೆಂಕಟೇಶ್.ಆರ್ ರವರು 56 ವರ್ಷ ವಯೊಸಹಜ ಖಾಯಿಲೆಯಿಂದ ಮನೆಯಲ್ಲಿ ಮೃತಪಟ್ಟಿದ್ದು ಅವರ ಕಣ್ಣುಗಳನ್ನು ಹೊಸಬೆಳಕು ಟ್ರಸ್ಟ್ ಮೂಲಕ ನಾರಾಯಣ ನೇತ್ರಾಲಯದ ಡಾ.ರಾಜಕುಮಾರ್ ನೇತ್ರ ನಿದಿಗೆ ದಾನ ಮಾಡಿದ್ದಾರೆ.
ಮೃತರ ಪತ್ನಿ ಶ್ರೀಮತಿ ವಿಮಲಾ ಮಾತನಾಡಿ ನಮ್ಮ ಯಜಮಾನರು ನೇತ್ರದಾನ ನೊಂದಣೀ ಮಾಡಿದ್ದರು, ಅವರ ನೇತ್ರದಾನ ನಮ್ಮ ಕುಟುಂಬಕ್ಕೆ ಹೆಮ್ಮೆ ತಂದಿದೆ,ಅವರು ಇಂದು ನಮ್ಮೊಡನಿಲ್ಲ ಆದರೆ ಅವರ ಕಣ್ಣುಗಳು ಇಬ್ಬರು ಕಣ್ಣುಕಾಣದ ಇನ್ನಾರದೋ ಮನೆಯಲ್ಲಿ ನಾಳೆ ಹೊಸಬೆಳಕಾಗಿ ಬೆಳಗಲಿವೆ ಎಂದರು.
ಮೃತರ ಮಕ್ಕಳಾದ ರಕ್ಷಿತ್ ಮತ್ತು ರಂಜಿತ್ ತಮ್ಮ ಅಭಿಪ್ರಾಯದಲ್ಲಿ ನಮ್ಮ ತಂದೆ ಡಾ.ರಾಜಕುಮಾರ್ ಅಭಿಮಾನಿ,ಲಯನ್ಸ್ ಕ್ಲಬ್ಬಿನ ಸದಸ್ಯರಾಗಿ ಹಲವಾರು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು,ಸಣ್ನ ಕಾರ್ಖಾನೆ ಶುರುಮಾಡಿ ನೂರಾರು ಕುಟುಂಬಗಳಿಗೆ ದಾರಿದೀಪವಾದರು, ಅವರ ಸೇವೆ ನಮಗೆ ಮಾದರಿ, ಡಾ.ರಾಜಕುಮಾರ್ ಮತ್ತು ಪುನೀತ್ ರಾಜಕುಮಾರ್ ನೇತ್ರದಾನದ ಸ್ಪೂರ್ತಿ, ಇಡೀ ದೇಶವೇ ಹೆಮ್ಮಾರಿ ಕರೋನಾದಿಂದ ಚೇತರಿಸ್ಕೊಳ್ಳುತ್ತಿದ್ದು ಸಾವಿರಾರು ಕಾರ್ನಿಯಾಗಳು ಅಗತ್ಯವಿದ್ದು ಸಾವಿನ ನಂತರ ಕಣ್ಣುಗಳನ್ನು ಮಣ್ಣಲ್ಲಿ ಮಣ್ಣಾಗಿಸದೆ, ಬೆಂಕಿಯಲ್ಲಿ ಸುಡದೆ ದಾನ ಮಾಡಿ ಕಣ್ಣು ಕಾಣದ ಇಬ್ಬರು ಕಾರ್ನಿಯ ಅಂಧಮಕ್ಕಳಿಗೆ ಹೊಸಬೆಳಕಿನ ಜೀವನ ನೀಡಬೇಕೆಂದು ಅವರ ಕಳಕಳಿಯ ಪ್ರಾರ್ಥನೆ ಮಾಡುತ್ತಾ ಇನ್ನು ಮುಂದೆ ಸಂಬಂದೀಕರ,ಸ್ನೇಹಿತರ ಮನೆಗಳಲ್ಲಿ ಸಾವು ಸಂಭವಿಸಿದರೆ ತಾವು ಖುದ್ದು ನಿಂತು ನೇತ್ರದಾನ ಮಾಡಿಸುತ್ತೇವೆ ಎಂದರು.
ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ ಸಹೋದರ ವೆಂಕಟೇಶ್ ಶಾಲಾ ಸಹಪಾಠಿ,ಶ್ರಮಜೀವಿ, ಸಣ್ಣ ವಯಸ್ಸಿನಲ್ಲಿ ಕಾರ್ಖಾನೆ ಶುರುಮಾಡಿ ಮಾದರಿಯಾಗಿದ್ದ,ಹೊಸಬೆಳಕು ಟ್ರಸ್ಟಿನ ಪೋಷಕ ಕೂಡಾ ಹೌದು,ಸದಾ ಸಮಾಜದ ಒಳಿತು ಬಯಸುತ್ತಿದ್ದು ಇಂದು ನೇತ್ರದಾನದ ಮೂಲಕ ಅಂಧರ ಬಾಳಿಗೆ ಬೆಳಕಾಗಿದ್ದನೆ ಎಂದರು.
ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
ಫೋಟೊ ಶೀರ್ಷಿಕೆ : 1 ಶ್ರೀ ಲಯನ್ ವೆಂಕಟೇಶ್.ಆರ್
ಫೋಟೊ ಶೀರ್ಷಿಕೆ : 2 ಮೃತರ ನೇತ್ರಗಳನ್ನು ಹಸ್ತಾಂತರಿಸುತ್ತಿರುವ ಮೃತರ ಪತ್ನಿ ಶ್ರೀಮತಿ ವಿಮಲಾ, ಮಕ್ಕಳಾದ ರಕ್ಷಿತ್ ಮತ್ತು ರಂಜಿತ್ ಹಾಗು ಕುಮಾರ್,ಹೊಸಬೆಳಕು ಟ್ರಸ್ಟಿನ ಜಿಗಣಿರಾಮಕೃಷ್ಣ,ನಾರಾಯಣ ನೇತ್ರಾಲಯದ ಡಾ.ಮಸ್ಕಾನ್ ಕುಟುಂಬಸ್ಥರು ಇದ್ದಾರೆ..
ಬುದ್ಧಭೀಮವಂಧನೆಗಳೊಂದಿಗೆ
Dr.Ramakrishna.M @ JiganiRamakrishna#Founder_Managing_Trustee #Hosabelaku_Trust 9945028899
Mr.JiganiVinod.M Councilor Ward No 22 – JiganiPurasabha. #Founder_Managing_Trustee #Sri_Sai_Vinod_Charitable_Trust 9036800123 #Jigani_Vinod #Jigani_Ramakrishna
Thanks & Regards Dr.M.RAMAKRISHNA( Hon Doctorate in Health Care & Social Services) 9945028899 ( Founder & Managing Trustee) Member : Eye Bank Association of India. Bhagavan Buddha &Dr.B.R.Ambedkar National Fellowship Awardee. SalumaraThimmakka International Greenery Ward 2019. And many more,..Address :Hosabelaku Trust(R) ಹೊಸಬೆಳಕು ಟ್ರಸ್ಟ್ (ರಿ )No.105. HosabelakuNilaya.NearBalaji Nagar Water Tank.Ward No 5.Yallammadevi Nagar.JIGANI (Village & Post) AnekalTalluk Bangalore 560 105 Mob : 99450 28899 / 9342171646 / 9141151699 email: hosabelakutrust@gmail.comjiganiramakrishna@gmail.com
#Donate_Organs_Gift_Life #Donate_Eyes_Gift_Sight #Donate_Blood_Save_Life #Plant_Tree_Save_Nation#ORGAN_EYE_BLOOD_Donation_let_be_our_Family_Tradition
If #ORGAN_EYE_BLOOD_Donation time comes please feel free to contact us at 24/7 Help Line Number 9945028899 we will organize it any where in India
Subscribe to:
Post Comments (Atom)



No comments:
Post a Comment