Friday, September 18, 2026
Eye Donation of Smt Ammayamma to Narayana Netralaya mother of Suvarna News Reporter Mr.Manjunathಹಿರಿಯ ಪತ್ರಕರ್ತ ಹೆಬ್ಬಗೋಡಿ ಮಂಜುನಾಥ್(Suvarna News,BLC) ಅವರ ತಾಯಿ ಅಮ್ಮಯಮ್ಮ (85) ಶುಕ್ರವಾರ ನಿಧನರಾದರು. ದುಃಖದ ನಡುವೆಯೂ ಕುಟುಂಬಸ್ಥರು ಮೃತರ ಎರಡೂ ಕಣ್ಣುಗಳನ್ನು ಬೊಮ್ಮಸಂದ್ರದ ನಾರಾಯಣ ನೇತ್ರಾಲಯಕ್ಕೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಹಿರಿಯ ಪತ್ರಕರ್ತ ಹೆಬ್ಬಗೋಡಿ ಮಂಜುನಾಥ್(Suvarna News,BLC) ಅವರ ತಾಯಿ ಅಮ್ಮಯಮ್ಮ (85) ಶುಕ್ರವಾರ ನಿಧನರಾದರು. ದುಃಖದ ನಡುವೆಯೂ ಕುಟುಂಬಸ್ಥರು ಮೃತರ ಎರಡೂ ಕಣ್ಣುಗಳನ್ನು ಬೊಮ್ಮಸಂದ್ರದ ನಾರಾಯಣ ನೇತ್ರಾಲಯಕ್ಕೆ ದಾನ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಅಮ್ಮಯಮ್ಮ ಅವರು ಐವರು ಮಕ್ಕಳನ್ನು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಶುಕ್ರವಾರ ಸಂಜೆ ಕೂಡ್ಲು ಚಿತಾಗಾರದಲ್ಲಿ ನೆರವೇರಿಸಲಾಯಿತು. ತಾಯಿಯ ಕಣ್ಣುಗಳನ್ನು ದಾನ ಮಾಡಿದ ಬಳಿಕ ಮಾತನಾಡಿದ ಮಂಜುನಾಥ್, “ನನ್ನ ತಾಯಿಯ ಕಣ್ಣುಗಳನ್ನು ದಾನ ಮಾಡಿದ್ದೇನೆ. ನಾಳೆ ಅಮ್ಮನ ಕಣ್ಣುಗಳು ಕಣ್ಣು ಕಾಣದ ಇಬ್ಬರ ಬಾಳಿನಲ್ಲಿ ಹೊಸ ಬೆಳಕಾಗಿ ಬೆಳಗಲಿವೆ. ಪ್ರತಿಯೊಬ್ಬರೂ ನೇತ್ರದಾನಕ್ಕೆ ಮುಂದಾಗಬೇಕು” ಎಂದು ಮನವಿ ಮಾಡಿದರು.
ನೇತ್ರದಾನ ಕಾರ್ಯದಲ್ಲಿ ಕುಟುಂಬದೊಂದಿಗೆ ಕೈಜೋಡಿಸಿದ ಹೊಸಬೆಳಕು ಟ್ರಸ್ಟ್‌ನ ಜಿಗಣಿ ರಾಮಕೃಷ್ಣ ಮಾತನಾಡಿ, “ಅಮ್ಮಯಮ್ಮ ಎಲ್ಲರೊಂದಿಗೆ ಬೆರೆತು ಸ್ನೇಹಜೀವಿಯಾಗಿದ್ದರು. ಅವರ ಅಗಲಿಕೆಯ ನೋವಿನ ಸಂದರ್ಭದಲ್ಲಿಯೂ ಕಣ್ಣುಗಳನ್ನು ದಾನ ಮಾಡುವ ಮೂಲಕ ಕುಟುಂಬ ಮಾನವೀಯತೆ ಮೆರೆದಿದೆ. ಕಣ್ಣುಗಳು ಮಣ್ಣಲ್ಲಿ ಮಣ್ಣಾಗುವ ಬದಲು ಇಬ್ಬರ ಬದುಕಿಗೆ ಬೆಳಕಾಗಲಿವೆ. ನೇತ್ರದಾನ ಪ್ರತಿಯೊಬ್ಬರ ಸಂಪ್ರದಾಯವಾಗಬೇಕು” ಎಂದರು.
ನಾರಾಯಣ ನೇತ್ರಾಲಯದ ವೈದ್ಯೆ ಡಾ. ಅನಿಷಾ, ಹೊಸಬೆಳಕು ಟ್ರಸ್ಟ್‌ನ ಜಿಗಣಿ ರಾಮಕೃಷ್ಣ, ನೇತ್ರನಿಧಿ ಅಶೋಕ್ ಸೇರಿದಂತೆ ಕುಟುಂಬಸ್ಥರ ಸಮ್ಮುಖದಲ್ಲಿ ಕಣ್ಣುಗಳನ್ನು ಹಸ್ತಾಂತರ ಮಾಡಲಾಯಿತು.
ನೇತ್ರದಾನ – ಅಂಗಾಂಗ ದಾನ – ದೇಹದಾನ ನಮ್ಮ ಕುಟುಂಬಗಳ ಸಂಪ್ರದಾಯವಾಗಿಸೋಣ.
ನೇತ್ರದಾನ – ಅಂಗಾಂಗ ದಾನ – ದೇಹದಾನದ ಸಮಯ ಬಂದಾಗ ಹತ್ತಿರದ ಮೆಡಿಕಲ್ ಕಾಲೇಜು, ನೇತ್ರ ನಿಧಿ ಅಥವಾ ಹೊಸಬೆಳಕು ಟ್ರಸ್ಟ್(ರಿ) 9945028899 ಸಂಪರ್ಕಿಸಬಹುದಾಗಿದೆ.
Subscribe to:
Post Comments (Atom)


No comments:
Post a Comment