Wednesday, March 18, 2015

66th Eye Donation thru Team Hosabelaku Trust 18.3.2015

66th Eye Donation thru Team Hosabelaku Trust
ಪ್ರಿಯ ಬಂಧುಗಳೇ 
ಕನ್ನಡ ಜಾಗೃತಿ ವೇದಿಕೆಯ ನೆರಳೂರು ಮುನಿರಾಜು ಅವರ ತಾಯಿ ಶ್ರಿ.ಮುನಿಯಮ್ಮನವರು ಇಂದು ಮರಣ ಹೊಂದಿದ್ದು ಅವರ ನೇತ್ರಗಳನ್ನು ನಾರಾಯಣ ನೇತ್ರಾಲಯಕ್ಕೆ ದಾನ ಮಾಡಿದ್ದಾರೆ.ಮುನಿಯಮ್ಮನವರು ಸತ್ತಿದ್ದು ಒಬ್ಬರು ಆದರೆ ಹೊಸಬೆಳಕಿನ,ಹೊಸಜಗತ್ತನ್ನು ನೋಡುವ ಸೌಭಾಗ್ಯವನ್ನು ಇಬ್ಬರು ಅಂಧರಿಗೆ ನೀಡಿ ಇಂದು ಅಮರರಾಗಿದ್ದಾರೆ.
ಬೆಳಿಗ್ಗೆ 7.10ನಿಮಿಶ ಮುನಿರಾಜು ಕರೆಮಾಡಿ ಸಾರ್ ಅಮ್ಮ ಹೋಗ್ಬಿಟ್ರು ಕಣ್ಣುದಾನಮಾಡಬೇಕು...ಮೊನ್ನೆ ನಿಮ್ಮಮ್ಮನ ಕಣ್ಣುದಾನ ಮಾಡಿದ್ರಲ್ಲಾ ಅದೇರೀತಿ ಪ್ಲೀಸ್ ಹೆಲ್ಪ್ ಮಾಡಿ ಅಂದ್ರು ನಾ ಆಗ ಸಾಂತ್ವಾನ ಹೇಳಿ ಅರ್ದಾಗಂಟೆ ಸಮಯದಲ್ಲಿ ನಾ ವ್ಯವಸ್ತೆ ಮಾಡ್ತೇನೆ ಅಂದೆ...ನಂತರದ ಕರೆ ನಾರಾಯಣ ನೇತ್ರಾಲಯದ ಐಬ್ಯಾಂಕ್ ಮ್ಯಾನೇಜರ್ ಅಶೋಕ್ ಅವರಿಗೆ,ಗಾಡಿ ಹತ್ತಿ ಮಡದಿ ಜೊತೆ ನೆರಳೂರಿಗೆ ಪಯಣ...ದೇಹ ಇದ್ದ ರೂಮನ್ನು ಸ್ವಚ್ಹಗೊಳಿಸುವ ಒತ್ತಿಗೆ ಡಾಕ್ಟರ್ ಹಾರಿಕ ಮತ್ತು ಟಿಂ ಆಗಮನ ಒಪ್ಪಿಗೆ ಪತ್ರ ಪಡೆದು ನಂತರ 10 ನಿಮಿಶದಲ್ಲಿ ನೇತ್ರಗಳನ್ನು ತೆಗೆದುಕೊಂಡು ಪ್ರಮಾಣಪತ್ರ..ಪ್ರಶಂಸಾ ಪತ್ರ ನೀಡಿ ಹೊರಟ್ರು...
ಮುನಿರಾಜು ಜೊತೆ ಸಹೊದರ/ಸಹೊದರಿ ಮತ್ತು ಕುಟುಂಬವನ್ನು ಅಗಲಿ ಹೊರಟಿದ್ದಾರೆ.
ಮುನಿರಾಜು ಅವರು ತಮ್ಮ ನೋವಿನಲ್ಲು ನೇತ್ರದಾನಕ್ಕೆ ಯೋಚನೆ ಮಾಡಿ ನಮ್ಮನ್ನು ಕರೆದು ನೇತ್ರದಾನ್ ಮಾಡಿದ್ದಕ್ಕಾಗಿ ಹೊಸಬೆಲಕು ಟ್ರಸ್ಟಿನ ಸಮಸ್ತರ ಪರವಾಗಿ ಸಾಸ್ಟಾಂಗ ಪ್ರಣಾಮಗಳು
ಶ್ರೀಯುತರ ಆತ್ಮಕ್ಕೆ ಶಾಂತಿಸಿಗಲಿ...
ಅವರ ಕುಟುಂಬಕ್ಕೆ ..ಭಗವಾನ್ ಬುದ್ಧ ನಿಮಗೆ, ನಿಮ್ಮಗಳ ಕುಟುಂಬಕ್ಕೆ ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು..ಕಾಪಾಡಲಿ..
ರಕ್ತದಾನ-ಜೀವದಾನ, ನೇತ್ರದಾನ-ದೃಷ್ಟಿ ದಾನ, ದೇಹದಾನ - ಪ್ರಾಣ ದಾನ
ನೇತ್ರಗಳನ್ನು ಬೆಂಕಿಯಲ್ಲಿ ಸುಡುವ ಬದಲು,ಮಣ್ಣಲ್ಲಿ ಮಣ್ಣಾಗಿಸುವ ಬದಲು ದಾನ ಮಾಡೋಣ ಇಬ್ಬರು ಅಂಧರಿಗೆ ಹೊಸಬೆಳಕಿನ ಬಾಳು ನೀಡೋಣ... ನೇತ್ರದಾನ ನಮ್ಮಗಳ ಕುಟುಂಬದ ಸಂಪ್ರದಾಯವಾಗಿಸೋಣ... ನೇತ್ರದಾನದ ಸಮಯ ಬಂದಾಗ ನಮ್ಮನ್ನು ಸಂಪರ್ಕಿಸಿ.
ಜಿಗಣಿರಾಮಕೃಷ್ಣ 9945028899ಹೊಸಬೆಳಕುಟ್ರಸ್ಟ್(ರಿ) ಭಗನಾನ್ ಬುದ್ಧ ರಾಷ್ಟ್ರೀಯ ಪ್ರಶಸ್ತಿ ಮತ್ತು ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರ ಪ್ರಶಸ್ತಿ ಪುರಸ್ಕೃತರು.. ಕತ್ತಲೆಯಿಂದ ಬೆಳಕಿನಡೆಗೆ ಪಯಣ..ನಿಮ್ಮಗಳ ಸಹಕಾರದೊಂದಿಗೆ hosabelakutrust@gmail.com


No comments:

Post a Comment